
ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಸನ್ನಿ ನೈಟ್ಸ್ ‘ಕಾರ್ಯಕ್ರಮಕ್ಕೆ ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಇದರಿಂದ ನನಗೇನು ಬೇಸರವಾಗಿಲ್ಲ ಎಂದಿದ್ದು, ಆ ಬಳಿಕ ವೇದಾಂತ ಹೇಳಿದ್ದು ಗೊತ್ತೇ ಇದೆ.
ಬಾಲಿವುಡ್ನ ಹಲವು ಹಿರಿಯ ತಾರೆಗಳಾದ ಶರ್ಮಿಳಾ ಠಾಗೂರ್, ಮಂದಾಕಿನಿ, ಡಿಂಪಲ್ ಕಪಾಡಿಯಾ, ರೇಖಾ, ಜೀನತ್ ಅಮಾನ್ ಹಾಗೂ ಮಧುಬಾಲ ಅವರ ಹಲವು ಮಾದಕ ಫೋಟೋಗಳನ್ನು ಹಂಚಿಕೊಂಡಿರುವ ಸನ್ನಿ ಲಿಯೋನ್, ‘ಬಾಲಿವುಡ್ನ ಕೆಲವು ಮಹಿಳೆಯರು ನಾನು ಹೀಗಿರುವುದೇ ಸರಿ ಎಂಬುದನ್ನು ಕಲಿಸಿದ್ದಾರೆ’ ಎಂದಿದ್ದಾರೆ.
ಶರ್ಮಿಳಾ ಠಾಗೂರ್ ಅವರ ಅನ್ ಈವಿನಿಂಗ್ ಇನ್ ಪ್ಯಾರಿಸ್ (1967) ಚಿತ್ರದ ಬಿಕಿನಿ ದೃಶ್ಯ, ರಾಮ್ ತೇರಿ ಗಂಗಾ ಮೈಲಿ (1985) ಚಿತ್ರದ ಪಾರದರ್ಶಕ ಸೀರೆಯಲ್ಲಿನ ಮಂದಾಕಿನಿ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಮೂಲಕ ಇಷ್ಟಕ್ಕೂ ಸನ್ನಿ ಲಿಯೋನ್ ಹೇಳಲು ಹೊರಟಿದ್ದೇನೆಂದರೆ, ಅರವತ್ತು, ಎಂಬತ್ತರ ದಶಕದಲ್ಲೇ ತಾರೆಗಳು ಅಷ್ಟು ಬೋಲ್ಡ್ ಆಗಿ ಇದ್ದರು. ಈಗ ನಾವು ಆ ರೀತಿ ಮಾಡಿದರೆ ಸಂಸ್ಕೃತಿ ಸಂಪ್ರದಾಯ ಎನ್ನುತ್ತಿದ್ದಾರೆ ಎಂಬುದು ಅವರ ಮನೋ ಇಂಗಿತ. ಇದನ್ನು ಅವರು ಹಳೆ ಮಾದಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸೂಚ್ಯವಾಗಿ ಹೇಳಿದ್ದಾರೆ.
Comments are closed.