ಮನೋರಂಜನೆ

ಅನಂತ್‌ನಾಗ್-ಸುಹಾಸಿನಿ ಜೋಡಿಯ ‘ಯಾನ’

Pinterest LinkedIn Tumblr

ಅನಂತ್‌ನಾಗ್ ಮತ್ತು ಸುಹಾಸಿನಿ ಬಹುಕಾಲದ ನಂತರ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಹೊಸ ಚಿತ್ರ ‘ಯಾನ’ದಲ್ಲಿ ಮತ್ತೆ ಈ ಜೋಡಿಯನ್ನು ತೆರೆಯಲ್ಲಿ ಕಾಣುವ ಅವಕಾಶ ಸಿಕ್ಕಿದೆ.

ವಿಜಯಲಕ್ಷ್ಮಿ ಸಿಂಗ್ ಅವರು ಕಥೆ ಬರೆಯುತ್ತಲೇ ಆ ಪಾತ್ರಕ್ಕೆ ಸುಹಾಸಿನಿ ಅವರನ್ನು ಫಿಕ್ಸ್ ಮಾಡಿಕೊಂಡಿದ್ದರಂತೆ. ಈ ಮೂಲಕ ಅದೆಷ್ಟೋ ದಶಕಗಳ ಕನಸೊಂದು ನನಸಾದ ಖುಷಿ ಅವರದ್ದು. ಬಹುಕಾಲದ ಗೆಳೆತನವಿದ್ದರೂ ಮನಸ್ಸಿಗೆ ತೃಪ್ತಿಯಾಗುವ ಪಾತ್ರವನ್ನು ಸುಹಾಸಿನಿ ಗೆಳತಿಗಾಗಿ ಸೃಷ್ಟಿಸಲು ಅವರಿಗೆ ಸಾಧ್ಯವಾಗಿರಲಿಲ್ಲವಂತೆ. ಆದರೆ ಹಳೆಯ ಕನಸೊಂದು ನನಸಾಗುವ ಖುಷಿ ವಿಜಯಲಕ್ಷ್ಮಿ ಅವರದ್ದಾದರೆ, ಬಹುಬೇಡಿಕೆಯ ಜೋಡಿಯನ್ನು ಒಂದಾಗಿ ನೋಡುವ ಅವಕಾಶ ಇಬ್ಬರ ಅಭಿಮಾನಿಗಳದ್ದು. ಅಂದ ಹಾಗೆ, ಅನಂತ್ ಮತ್ತು ಸುಹಾಸಿನಿ ಜೋಡಿಯಾಗಿ ನಟಿಸುತ್ತಿರುವ ಒಂಬತ್ತನೇ ಚಿತ್ರ ಇದಾಗಲಿದೆ.

ಈ ಚಿತ್ರವನ್ನು ACME ಮೂವೀಸ್ ಇಂಟೆರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ದುಬೈಯ ಖ್ಯಾತ ಉದ್ಯಮಿ, ಗಾಯಕರೂ ಆಗಿರುವ ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, ವೈಭವಿ, ವೈನಿಧಿ, ವೈಸಿರಿ ನಿರ್ಮಿಸಿದ್ದಾರೆ. ಸುನಿ ಹಾಗೂ ಮಧು ಬಿ.ಎ. ಸಂಭಾಷಣೆ‌, ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಕರ್ಮ್ ಚಾವ್ಲಾ ಛಾಯಾಗ್ರಹಣ ಅವರದು. ವೈಭವಿ, ವೈನಿಧಿ, ವೈಸಿರಿ, ಚಕ್ರವರ್ತಿ, ಸುಮುಖ, ಅಭಿಷೇಕ್, ಅನಂತನಾಗ್, ಸುಹಾಸಿನಿ ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರರಾಜ್, ಸುಂದರ್, ವೀಣಾಸುಂದರ್, ಎಂ.ಎನ್.ಲಕ್ಷ್ಮೀದೇವಿ ತಾರಾಗಣದಲ್ಲಿದ್ದಾರೆ.

Comments are closed.