ಮನೋರಂಜನೆ

​ಐಶ್‌ ತೊಟ್ಟಿರುವ ಈ ಗೌನ್‌ ಬೆಲೆ ಗೊತ್ತಾ?

Pinterest LinkedIn Tumblr


ಸಿನಿಮಾ ಸೆಲೆಬ್ರಿಟಿಗಳು ಫ್ಯಾಶನ್‌ಗೆ ತುಂಬಾನೇ ಒತ್ತು ಕೊಡುತ್ತಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಮಾಜಿ ವಿಶ್ವ ಸುಂದರಿ, ನೀಲಿ ಕಂಗಳ ಚೆಲುವೆ ಐಶ್ವರ್ಯ ರೈ ಬಚ್ಚನ್‌ ದುಬಾರಿ ಗೌನ್‌ ತೊಟ್ಟು ಸಖತ್‌ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಈ ಗೌನ್‌ ಬೆಲೆ ಎಷ್ಟು ಗೊತ್ತಾ?

ಬರೋಬ್ಬರಿ 3.73 ಲಕ್ಷ ರೂ. ಅಂದಹಾಗೆ ಐಶ್‌ ಈ ದುಬಾರಿ ಗೌನ್‌ ಧರಿಸಿ ಮಿಂಚಿದ್ದು ಅಂಬಾನಿ ಕುಟುಂಬದ ಪಾರ್ಟಿಯೊಂದರಲ್ಲಿ ಎನ್ನುವುದು ವಿಶೇಷ. ಅಂಬಾನಿ ಕುಟುಂಬದಿಂದ ಆಯೋಜಿಸಲಾಗಿದ್ದ ಅದ್ಧೂರಿ ಡಿನ್ನರ್‌ ಪಾರ್ಟಿಯಲ್ಲಿ ಐಶ್‌ ಬಂಗಾರದಲ್ಲಿ ಅದ್ದಿದ ಗೊಂಬೆಯಂತೆ ಕಂಗೊಳಿಸಿದರು.

ಇನ್ನು ಹಳದಿ ಬಣ್ಣ ಮಿಶ್ರಿತ ಈ ಮನಮೋಹಕ ಗೌನನ್ನು ಡಿಸೈನ್‌ ಮಾಡಿದ್ದು ಆಸ್ತಾ ಶರ್ಮಾ. ಬರೀ ಡಿನ್ನರ್‌ ಪಾರ್ಟಿಗೆ ಐಶ್‌ ಇಷ್ಟೊಂದು ದುಬಾರಿ ಬಟ್ಟೆ ತೊಟ್ಟಿರುವುದು ಬಾಲಿವುಡ್‌ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಐಶ್‌ ‘ಫನ್ನಿ ಖಾನ್‌’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

Comments are closed.