ಬೆಂಗಳೂರು: ಈ ವಾರದ ಬಿಗ್‌ಬಾಸ್ ಮನೆ ಗಲಾಟೆ, ಚೀರಾಟ-ಕೂಗಾಟದಿಂದಾಗಿ ಗೊಂದಲದ ಗೂಡಾಗಿತ್ತು. ಈ ಮಧ್ಯೆ ಶುಕ್ರವಾರ ಬಿಗ್‌ಬಾಸ್ ಮನೆಯಲ್ಲಿ ಬೆಸ್ಟ್ ಪರ್ಫಾಮರ್ ದಿವಾಕರ್’ಗೆ ಕೊಟ್ಟದ್ದಕ್ಕೆ ಮನೆ ಮಂದಿ ಹಾಗು ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ನೀಡಿದ್ದ ಗಂಧದ ಗುಡಿ ಎನ್ನುವ ಟಾಸ್ಕಿನಲ್ಲಿ ದಿವಾಕರ್ ತೋರಿದ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವೀಕ್ಷಕರು, ಮನೆಯ ಕ್ಯಾಪ್ಟನ್ ಜಗನ್ ಅವರಿಗೆ ಬೇರೆ ಯಾರು ಕಾಣಲಿಲ್ಲವೇ …? ಮನೆಯಲ್ಲಿ ರಿಯಾಜ್’ರನ್ನು ಪದೇ ಪದೇ ಕೆಣಕಿ ಅವರೊಂದಿಗೆ ಅಸಭ್ಯ ಭಾಷೆಯಲ್ಲಿ ಬೈದಾಡಿಕೊಂಡು ನೋಡುಗರಿಗೆ ಮುಜುಗರ ತರುವ ರೀತಿಯಲ್ಲಿ ವರ್ತಿಸಿರುವ ದಿವಾಕರ್’ಗೆ ಬೆಸ್ಟ್ ಪರ್ಫಾರ್ಮರ್ ನೀಡಿದ್ದು ಸರಿಯಲ್ಲ ಎಂದು ವೀಕ್ಷಕರು ಕಿಡಿಕಾರಿದ್ದಾರೆ.
ಗಂಧದ ಗುಡಿ ಟಾಸ್ಕಿನಲ್ಲಿ ಪ್ರಾಣಿಯಾಗಿದ್ದ ದಿವಾಕರ್ ಹಲವು ಬಾರಿ ತನ್ನ ಪಾತ್ರದಿಂದ ಹೊರಬಂದು ಬೈದಾಡಿಕೊಂಡಿದ್ದು, ಇದನ್ನು ಬಿಗ್ ಬಾಸ್ ಕೂಡ ಸ್ಪಷ್ಟಪಡಿಸಿದ್ದು, ಪ್ರಾಣಿಗಳು ತಮ್ಮ ಪಾತ್ರದಿಂದ ಹೊರಬಂದದ್ದಕ್ಕೆ 2000 ಲಕ್ಸುರಿ ಬಜೆಟನ್ನು ಬಿಗ್ ಬಾಸ್ ಮನೆ ಕಳೆದುಕೊಂಡಿದೆ. ಜೊತೆಗೆ ಟಾಸ್ಕಿನಲ್ಲಿ ಜಯಗಳಿಸುವ ತಂಡದ ಸದಸ್ಯರಿಗೆ ಬೆಸ್ಟ್ ಪರ್ಫಾರ್ಮರ್ ನೀಡಬೇಕಿತ್ತು. ಕಳಪೆ ಬೋರ್ಡ್’ನ್ನು ಜಗನ್ ನಿವೇದಿತಾಳಿಗೆ ನೀಡಿದ್ದು, ಸರಿ ಅಲ್ಲ ಎಂದಿದ್ದಾರೆ ವೀಕ್ಷಕರು.
ಜಗನ್ ತೆಗೆದುಕೊಂಡ ನಿರ್ಧಾರವನ್ನು ರಿಯಾಜ್ ಅವರು ಜಗನ್ ಜೊತೆ ನೇರವಾಗಿ ಹೇಳಿದ್ದು, ದಿವಾಕರ್’ಗಿಂತ ತಾನು ಚೆಂದವಾಗಿ ಆಡಿದ್ದೇನೆ..ತನಗೆ ನೀಡ್ಬೇಕಿಯಿತು ಅಂತ. ದಿವಾಕರ್’ಗೆ ಬೆಸ್ಟ್ ಪರ್ಫಾರ್ಮರ್ ನೀಡಿದ್ದು, ಬಹುತೇಕೆ ಮನೆ ಮಂದಿಗೆ ಸರಿಕಾಣಲಿಲ್ಲ. ನಾಳೆ ಸುದೀಪ್ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.