ಕರಾವಳಿ

ಸಿ.ಎಂ ಹಿಂದೂಗಳ ಹೆಣದ ಮೇಲೆ ಶಿಲಾನ್ಯಾಸ ಮಾಡುತ್ತಿದ್ದಾರೆ: ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ಹೊನ್ನವರದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಆಗಿರುವ ಬಗ್ಗೆ ಸಿಎಂ ಗೆ ಗೊತ್ತಿದ್ದರೂ ಉತ್ತರಕನ್ನಡದಲ್ಲಿ 52 ಶಿಲಾನ್ಯಾಸ ಕಾರ್ಯಕ್ರಮ ಮಾಡಿದರು.  ಮಂಗಳೂರಿನ ಶರತ್ ಮಡಿವಾಳ ಸಾವಿನ ಸಂಧರ್ಭದಲ್ಲೂ ಇದೇ ರೀತಿ ಮಾಡಿದ್ದು ಇದು ಅವರ ಕೆಟ್ಟ ಪ್ರವ್ರತ್ತಿಯನ್ನು ತೋರಿಸುತ್ತದೆ ಎಂದು ಉಡುಪಿ ಸಂಸದೆ ಶೋಭಾ ಕರಾಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಪರೇಶ್ ಮೇಸ್ತನನ್ನು ಮುಸ್ಲಿಂ ಜಿಹಾದಿಗಳು ಕೊಂದಿರುವ ಬಗ್ಗೆ ಸ್ವತಃ ಸಿ ಎಂ ಗೆ ಗೊತ್ತಿದ್ದರೂ ಕೂಡ ಪ್ರಕರಣವನ್ನು ಮುಚ್ಚಿ ಹಾಕಿ ಆತನ ಹೆಣದ ಮೇಲೆ ಶಿಲಾನ್ಯಾಸ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಆತನ ಸಾವಿನ ಬಗ್ಗೆ ಬಹಿರಂಗ ಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಇದೇ ರೀತಿ ಮಂಗಳೂರಿನ ಶರತ್ ಮಡಿವಾಳ ಸಾವಿನ ಸಂಧರ್ಭದಲ್ಲೂ ಮಾಡಿದ್ದಾರೆ. ಹಿಂದೂ ವಿರೋಧಿ ದೋರಣೆಯನ್ನು ಮುಖ್ಯಮಂತ್ರಿಗಳು ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಖ್ಯ ಮಂತ್ರಿಗಳು ಹೊನ್ನಾವರಕ್ಕೆ ತೆರಳುವ ಮುನ್ನವೇ ಅಲ್ಲಿ ಗಲಭೆ ಆರಂಭಗೊಂಡಿತ್ತು,ಅಲ್ಲಿರುವ ಜಿಹಾದಿಗಳು ಹಿಂದೂಗಳ ಮಜೇಲೆ ದೌರ್ಜನ್ಯ ಮಾಡಿದ್ದಾರೆ.ಅದರೂ ಪೊಲೀಸರು ಯಾವುದೇ ಕ್ರಮಗಳನ್ನ ಕೈಗೊಳ್ಳಲಿಲ್ಲ,ಇದರ ಪರಿಣಾಮ ಮತ್ತೆ ಹೊನ್ನಾವರದಲ್ಲಿ ಮತ್ತೆ ಹಿಂದೆ ಬುಗಿಲೆದ್ದಿತ್ತು.ಹಿಂಸೆಗೆ ಕಾರಣರಾದವರನ್ನು ಬಂದಿಸುವ ಬದಲು ಹಿಂದೂ ಕಾರ್ಯಕರ್ತರ ಮೇಲೆಯೇ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.ಕಾರ್ಯಕರ್ತರ ಮೇಲೆ ಮಚ್ಚುಗಳನ್ನ ಬೀಸಿದ್ದಾರೆ ಅದರೂ ಪೊಲೀಸರು ಯಾವುದೇ ರೀತಿಯ ಕ್ರಮಗಳನ್ನ ಕೈಗೊಂಡಿಲ್ಲ.ಈ ಮದ್ಯೆ ಪರೇಶ್ ಮೇಸ್ತರ ಕೊಲೆ ನಡೆದಿದೆ.ಅದನ್ನ ಪೊಲೀಸರು ಮುಖ್ಯಮಂತ್ರಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಮುಚ್ಚಿಟ್ಟಿದ್ದಾರೆ.

ಸಿ ಎಂಗೆ ಶೋಭಾ ಗೆ ಪ್ರಶ್ನೆ…..
ಹಿಂದೂ ಕಾರ್ಯಕರ್ತನ ಸಾವಿನ ಬಗ್ಗೆ ಮುಖ್ಯ ಮಂತ್ರಿಗಳಿಗೆ ಗೊತ್ತಿರಲಿಲ್ಲವೇ..ಪರೇಶ್ ಮೇಸ್ತ ಸತ್ತಿರುವ ಬಗ್ಗೆ ನಿಮಗೆ ಮಾಹಿತಿ ಇರಲಿಲ್ಲವೇ…?ಅಥವಾ ಪೊಲೀಸ್ ಇಲಾಖೆ ನಿಮಗೆ ಮಾಹಿತಿ ನೀಡಿಲ್ಲವೇ…?ಹಾಗಿದ್ದರೆ ನಿಮ್ಮ ಗೂಢಚಾರ ಇಲಾಖೆ ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.
ಪರೇಶ್ ಮೇಸ್ತಾ ಸಾವನ್ನಾಪ್ಪಿರುವ ಬಗ್ಗೆ ಮೊದಲೇ ಸಿ ಎಂ ಗೆ ಗೊತ್ತಿದ್ದರಿಂದ ಹೊನ್ನವರದಲ್ಲಿ ಅಷ್ಟೊಂದು ಪೊಲೀಸ್ ಬಂದೂ ಬಸ್ತ್ ಮಾಡಿ ನಿಷೇಜ್ನಾಜ್ನೆ ಮಾಡಲಾಗಿತ್ತು. ವೆವಸ್ಥಿತವಾಗಿ ಪ್ರಕರಣವನ್ನು ಮುಚ್ಚಿ ಹಾಕಿ ಪ್ರವಾಸ ಮಾಡಿ ಮುಗಿಸಿದ್ದೀರಿ .ರಾಜ್ಯದ ಮುಖ್ಯಮಂತ್ರಿಯಾಗಿ ನೀವೆ ಹೀಗೆ ಮಾಡಿದ್ರೆ , ಈ ರಾಜ್ಯದಲ್ಲಿ ಜನರಿಗೆ ನ್ಯಾಯ ಕೊಡುವವರು ಯಾರೆಂದು ಪ್ರಶ್ನಿಸಿದ್ದಾರೆ.

ಪ್ರಧಾನಿಯನ್ನು ನೀಚ ಶಬ್ದ ಬಳಕೆ ಕಾಂಗ್ರೆಸ್ಸ್ಇನ ಮಾನಸಿಕತೆಗೆ ಹಿಡಿದ ಕನ್ನಡಿ :ಶೋಭಾ
ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ನೀಚ ಪದ ಬಳಕೆಯ ಕುರಿತಾಗಿ ಮಾತನಾಡಿದ ಶೋಭಾ ಕರಾಂದ್ಲಾಜೆ ಕಾಂಗ್ರೆಸ್ಸಿನ ಮಾನಸಿಕತೆಯನ್ನು ಮಣಿಶಂಕರ್ ಅಯ್ಯರ್ ಸಾಬೀತು ಮಾಡಿದ್ದಾರೆ.ಬಡ ಹಿಂದುಳಿದ ವರ್ಗದವರು ಪ್ರಧಾನಿಯಾದ್ರೆ ನೀವು ನೀಚ ಅಂತೀರಿ.ಇದು ಕಾಂಗ್ರೆಸ್ ಗೆ ಬಹಳ ದುಬಾರಿ ಯಾಗಲಿದೆ.ಈ ಬಗ್ಗೆ ಕಾಂಗ್ರೆಸ್ ಅಯ್ಯರನ್ನು ಅಮಾನತು ಮಾಡಿದ್ದು ಬರೀ ಕಣ್ಣೊರೆಸುವ ತಂತ್ರ ಅಷ್ಟೇ.. ಗುಜರಾತ್ ಚುನಾವಣೆಯಲ್ಲಿ ಜನ ಕಾಂಗ್ರಸ್ ಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Comments are closed.