ಮನೋರಂಜನೆ

ಬಿಗ್‌ಬಾಸ್‌‌ ಮನೆಯೊಳಗೆ ಪ್ರಥಮ್’ನ ನಾಯಕಿಯ ಎಂಟ್ರಿ ! ಹೊಸ ನಟಿ ಎಂಟ್ರಿ ಕಂಡು ಮನೆಮಂದಿಗೆ ಅಚ್ಚರಿ

Pinterest LinkedIn Tumblr

ಬೆಂಗಳೂರು: ಈಗಾಗಲೇ 50 ದಿನಗಳು ಪೂರೈಸಿರುವ ಕನ್ನಡದ ಬಿಗ್‌‌ಬಾಸ್‌ಮನೆಗೆ ಈಗ ಹೊಸ ನಟಿಯೋರ್ವರು ಎಂಟ್ರಿ ಕೊಟ್ಟಿದ್ದಾರೆ.

ಈ ನಟಿ ಹೆಸರು ವೈಷ್ಣವಿ ಚಂದ್ರನ್ ಮೆನನ್. ‘ಬಿಗ್ ಬಾಸ್ ಕನ್ನಡ-4’ ಕಾರ್ಯಕ್ರಮದ ವಿಜೇತ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ ‘ದೇವ್ರಂಥ ಮನುಷ್ಯ’ ಚಿತ್ರದ ನಾಯಕಿ ಈ ವೈಷ್ಣವಿ ಚಂದ್ರನ್ ಮೆನನ್.

ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ವೈಷ್ಣವಿ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ಐವತ್ತು ದಿನ ಪೂರೈಸಿ, ಅರ್ಧ ಆಟ ಮುಗಿಸಿರುವ ಹನ್ನೆರಡು ಸ್ಪರ್ಧಿಗಳ ಮಧ್ಯೆ ಹೊಸ ಸ್ಪರ್ಧಿ ಎಂಟ್ರಿಕೊಟ್ಟಿದ್ದಾರೆ. ಮನೆಯೊಳಗೆ ಯಾರಾದರೂ ಹೊಸಬರು ಎಂಟ್ರಿ ಕೊಡುದನ್ನು ಕಾಯುತ್ತಿದ್ದ ಮನೆ ಮಂದಿಗೆಲ್ಲ ವೈಶ್ಣವಿಯನ್ನು ಕಂಡು ಅಚ್ಚರಿಯಾಗಿದೆ.

ಸದ್ಯ ಮನೆಯಲ್ಲಿದ್ದಾರೆ ಹನ್ನೆರಡು ಸ್ಪರ್ಧಿಗಳು ಏಳು ವಾರಗಳಲ್ಲಿ ಐದು ಜನ ಎಲಿಮಿನೇಟ್ ಆಗಿದ್ದಾರೆ. ಕೃಷಿ ರೀಎಂಟ್ರಿ ಕೊಟ್ಟಿದ್ದಾರೆ. ಸದ್ಯ ಮನೆಯಲ್ಲಿ ಇರುವ ಹನ್ನೆರಡು ಸ್ಪರ್ಧಿಗಳ ಜೊತೆ ವೈಷ್ಣವಿ ಕೂಡ ಸೇರಿಕೊಂಡಿದ್ದಾರೆ.

Comments are closed.