ಬೆಂಗಳೂರು: ಬಿಗ್‌ಬಾಸ್‌ಮನೆಯಲ್ಲಿ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಶನಿವಾರ ಸಿಹಿ ಕಹಿ ಚಂದ್ರು ಔಟ್ ಆಗಿದ್ದಾರೆ. ಇದು ಮನೆ ಮಂದಿಗೆಲ್ಲ ಶಾಕ್ ನೀಡುವಂತೆ ಮಾಡಿದೆ.
‘ವಾರದ ಕಥೆ ಕಿಚ್ಚನ ಜತೆ’ ಎಪಿಸೋಡ್’ನಲ್ಲಿ ಕಿಚ್ಚ ಸುದೀಪ್ ಈ ಬಾರಿ ಮನೆಯಿಂದ ಹೊರಹೋಗುವ ಸದಸ್ಯ ಸಿಹಿ ಕಹಿ ಚಂದ್ರು ಎಂದು ಪ್ರಕಟಿಸುತ್ತಿದ್ದಂತೆ ಮನೆ ಮಂದಿ ಒಮ್ಮೆಗೆ ಶಾಕ್ ಗೊಂಡರು.
ಕೃಷಿ ತಾಪಂಡ, ಸಮೀರಾಚಾರ್ಯ, ರಿಯಾಝ್, ದಿವಾಕರ್, ಜಯಶ್ರೀನಿವಾಸನ್ ಹಾಗು ಸಿಹಿ ಕಹಿ ಚಂದ್ರು ಈ ವಾರ ನಾಮಿನೇಟ್ ಆಗಿದ್ದರು. ಮನೆ ಮಂದಿ ಎಲ್ಲ ಸಮೀರಾಚಾರ್ಯ ಅಥವಾ ದಿವಾಕರ್ ಮನೆಯಿಂದ ಹೊರಹೋಗಬಹುದು ಅಂದುಕೊಂಡಿದ್ದರು.
ಸುದೀಪ್‌ಅವರು ಎಂದಿನಂತೆ ಮನೆಯ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸುವ ಮೂಲಕ ಎಲಿಮಿನೇಟ್ ಪ್ರಕ್ರಿಯೆ ಆರಂಭಿಸಿದರು. ಮೊದಲಿಗೆ ಕೃಷಿಯವರನ್ನು ಸೇಫ್ ಮಾಡಿದ ಸುದೀಪ್, ಬಳಿಕ ಜಯ ಶ್ರೀನಿವಾಸನ್, ಸಮೀರ್, ರಿಯಾಜ್ ಅವರನ್ನು ಸೇಫ್ ಮಾಡಿದರು. ಕೊನೆಯದಾಗಿ ದಿವಾಕರ್ ಹಾಗೂ ಸಿಹಿಕಹಿ ಚಂದ್ರು ಅವರು ಉಳಿದುಕೊಂಡಿದ್ದರು. ಈ ಇಬ್ಬರಲ್ಲಿ ದಿವಾಕರ್ ಅವರನ್ನು ಉಳಿಸಿಕೊಂಡ ಸುದೀಪ್, ಸಿಹಿಕಹಿ ಚಂದ್ರು ಅವರನ್ನು ಎಲಿಮಿನೇಟ್‌ಮಾಡಿದರು.
ಇನ್ನು ಬಿಗ್‌ಬಾಸ್‌ಮನೆಯಲ್ಲಿ 50 ದಿನಗಳನ್ನು ಕಳೆದು ಮನೆಯಿಂದ ಹೊರಬಂದ್ರು ಸಿಹಿಕಹಿ ಚಂದ್ರು. ಇಷ್ಟು ದಿನಗಳ ವರೆಗೆ ಅವರು ಮನೆಯಲ್ಲಿ ಎಲ್ಲರಿಗೂ ಆತ್ಮಿಯರಾಗಿದ್ದರು. ಅದರಲ್ಲಿಯೂ ಅನುಪಮಾ ಅವರಿಗೆ ತಂದೆಯಂತಾಗಿದ್ದರು. ಈ ವಾರ ಮನೆಯಿಂದ ಚಂದ್ರು ಅವರು ಹೊರಹೋಗುತ್ತಿರುವ ಸುದ್ದಿ ಕೇಳಿದ ಮನೆಯ ಸದಸ್ಯರೆಲ್ಲರು ಕಣ್ಣೀರು ಹಾಕಿದರು. ಚಂದ್ರು ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.