ಮನೋರಂಜನೆ

ಖ್ಯಾತ ಹಿರಿಯ ನಟಿ ರೀಟಾ ಕೊಯಿರಾಲ್ ವಿಧಿವಶ

Pinterest LinkedIn Tumblr


ಕೋಲ್ಕತ್ತಾ: ಖ್ಯಾತ ಹಿರಿಯ ನಟಿ ರೀಟಾ ಕೊರಿಯಲ್ ಅವರು ಇಂದು ವಿಧಿವಶರಾಗಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಯಕೃತ್ತಿನ(ಲಿವರ್) ಕ್ಯಾನ್ಸರ್ ನಿಂದ ಬಳಲುತ್ತಿದ್ದ 58 ವರ್ಷದ ರೀಟಾ ಕೊರಿಯಲ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರೀಟಾ ಕೊರಿಯಲ್ ಅವರು 1999ರಲ್ಲಿ ಬಿಡುಗಡೆಯಾಗಿದ್ದ ರೀಟಾ ಅಶುಖ್ ಮತ್ತು 2012ರ ಪರೋಮಿಟಾರ್ ಎಕ್ ದಿನ್ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

ರೀಟಾ ಕೊಯಿರಲ್ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಂಬನಿ ಮಿಡಿದಿದ್ದಾರೆ. ರೀಟಾ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

Comments are closed.