ರಾಷ್ಟ್ರೀಯ

ಅಯ್ಯಪ್ಪ ಮಂದಿರ ಪ್ರವೇಶಿಸಲು ಯತ್ನಿಸಿದ 31 ವರ್ಷದ ಮಹಿಳೆ!

Pinterest LinkedIn Tumblr


ಶಬರಿ ಮಲೈ: 31 ವರ್ಷದ ಮಹಿಳೆ ವಿಶ್ವವಿಖ್ಯಾತ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸುವುದಕ್ಕೆ ಯತ್ನಿಸಿದ್ದಾರೆ. ಅಯ್ಯಪ್ಪ ದೇವಾಲಯದಲ್ಲಿ 10-50 ವಯಸ್ಸಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ದೇವಾಲಯಕ್ಕೆ ಪ್ರವೇಶಿಸುತ್ತಿದ್ದ ಆಂಧ್ರಪ್ರದೇಶದ ಮಹಿಳೆಯನ್ನು ಪಥಿನೆಟ್ಟಾಂ ಪಡಿ (18 ಮೆಟ್ಟಿಲುಗಳು) ಬಳಿ ತಡೆಹಿಡಿಯಲಾಗಿದ್ದು, ವಾಪಸ್ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಯ್ಯಪ್ಪನನ್ನು ನೈಷ್ಠಿಕ ಬ್ರಹ್ಮಚಾರಿ ಎಂದು ಪರಿಗಣಿಸಲಾಗಿದ್ದು 10-50 ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮಹಿಳೆಯ ಗುರುತಿನ ಚೀಟಿಯ ಮೂಲಕ ಆಕೆ 31 ವರ್ಷದವರೆಂದು ತಿಳಿದುಬಂದಿದ್ದು, ವಾಪಸ್ ಕಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.