
ಕೋಲ್ಕತಾ : ನನಗೆ ಯಾವುದೇ ಅಪಘಾತವಾಗಿಲ್ಲ,ನಾನು ಕ್ಷೇಮವಾಗಿದ್ದೇನೆ, ಅಪಘಾತದ ಕುರಿತು ತಪ್ಪು ಸುದ್ದಿ ಪ್ರಕಟವಾಗಿದೆ ಎಂದು ಬಾಲಿವುಡ್ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಶುಕ್ರವಾರ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಕೊಲ್ಕತಾದಲ್ಲಿ ಬಿಗ್ ಅವರ ಕಾರು ಅಪಘಾತಕ್ಕೀಡಾಗಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿ ಅಭಿಮಾನಿಗಳು ಭಯಗೊಂಡಿದ್ದರು.
ಕಾರ್‌ನ ಚಕ್ರ ಬೇರ್ಪಟ್ಟು ಅಪಘಾತ ಸಂಭವಿಸಿದ್ದು,ಅಮಿತಾಭ್ ಪಾರಾಗಿದ್ದರು ಎಂದು ವರದಿಯಾಗಿತ್ತು. ಆದರೆ ಸುದ್ದಿಯನ್ನು ಅಮಿತಾಭ್ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ.
-ಉದಯವಾಣಿ
Comments are closed.