ಅಂತರಾಷ್ಟ್ರೀಯ

ಭಾರತೀಯ ಮಸಾಲೆ, ಆಯುರ್ವೇದ ಉತ್ಪನ್ನಗಳಿಗೆ ಚೀನಾದಲ್ಲಿ ಹೆಚ್ಚಿದೆ ಬೇಡಿಕೆ

Pinterest LinkedIn Tumblr


ಬೀಜಿಂಗ್: ಗಡಿ ವಿಷಯದಲ್ಲಿ ಪದೆ ಪದೇ ಖ್ಯಾತೆ ತೆಗೆಯುತ್ತಿರುವ ಚೀನಾ ಮೇಲೆ ಭಾರತ ಮುನಿಸಿಕೊಂಡಿದ್ದು, ಅಲ್ಲಿಯ ಉತ್ಪನ್ನಗಳ ಮಾರಾಟ ನಮ್ಮ ದೇಶದಲ್ಲಿ ಗಣನೀಯವಾಗಿ ಕುಸಿಯುತ್ತಿದೆ. ಆದರೆ, ನಮ್ಮ ದೇಶದ ಮಸಾಲೆ ಪದಾರ್ಥಗಳು ಹಾಗೂ ಆಯುರ್ವೇದ ಉತ್ಪನ್ನಗಳಿಗೆ ಚೀನಾದಲ್ಲಿ ಬೇಡಿಕೆ ಹೆಚ್ಚಾಗಿದೆ.

ಶನಿವಾರ ನಡೆದ ಒಂದು ದಿನದ ಶಾಪಿಂಗ್ ಮೇಳದಲ್ಲಿಯೇ ಸಿಕ್ಕಾಪಟ್ಟೆ ಭಾರತೀಯ ಮಸಾಲೆ ಖಾಲಿಯಾಗಿದ್ದು, ಚೀನಿಯರಿಗೆ ಭಾರತೀಯ ಮಸಾಲೆ ಮೇಲಿರುವ ವ್ಯಾಮೋಹ ಹೆಚ್ಚಾಗಿರುವುದು ತಿಳಿಯುತ್ತಿದೆ.

ಒಂದು ದಿನದ ನಡೆದ ಆನ್‌ಲೈನ್ ಶಾಪಿಂಗ್ ಮೇಳದಲ್ಲಿ ಸುಮಾರು 300 ಕೋಟಿ ಡಾಲರ್ ವ್ಯವಹಾರ ನಡೆದಿದ್ದು, ಚೀನಾ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗಿವೆ. ಅಲ್ಲದೇ ಭಾರತ, ಯರೋಪ್ ಮತ್ತು ಅಮೆರಿಕದ ಉತ್ಪನ್ನಗಳೆಡೆಗೂ ಚೀನಿಯರು ಹೆಚ್ಚು ಒಲವು ತೋರಿದ್ದಾರೆ.

ಭಾರತೀಯ ದಿನಸಿ ಉತ್ಪನ್ನಗಳು, ರೆಡಿ ಮೇಡ್ ಆಹಾರ ಉತ್ಪನ್ನಗಳು, ಅಮುಲ್, ಎಂಡಿಎಚ್ ಮಸಾಲಾ, ಗಿಟ್ಸ್, ಟಾಟಾ ಟೀ, ಹಲ್ದೀರಾಮ್, ಡಾಬರ್, ಪತಂಜಲಿ ಹಾಗೂ ಹಿಮಾಲಯ ಸೇರಿ ಮುಂತಾದ ಕಂಪನಿಗಳ ಸೌಂದರ್ಯ ಹಾಗೂ ಆಯುರ್ವೇದ ಉತ್ಪನ್ನಗಳನ್ನು ಚೀನಿಯರು ಹೆಚ್ಚು ಕೊಂಡಿದ್ದಾರೆ.

ನವೆಂಬರ್ 11 ರಂದು (11/11) ಹಮ್ಮಿಕೊಂಡ ಈ ಮೇಳದಲ್ಲಿ, ಸಿಂಗಲ್ ಡೇ ಪ್ಲಸ್ ಎಂದು ಹೆಸರಿಸಿ, ಗ್ರಾಹಕರನ್ನು ಆಕರ್ಷಿಸಲಾಗಿತ್ತು. ಆದರೆ, ಹೆಚ್ಚಿನ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ ಉತ್ಪನ್ನಗಳನ್ನು ವಿವಾಹಿತರು ಸೇರಿ ಎಲ್ಲ ವರ್ಗದವರೂ ಕೊಂಡಿದ್ದಾರೆ.

ಕಳೆದ ವರ್ಷಕ್ಕಿಂತಲೂ ಈ ವರ್ಷದ ಮೇಳದಲ್ಲಿ ಶೇ.39ರಷ್ಟು ಹೆಚ್ಚಿನ ವಹಿವಾಟು ನಡೆದಿದ್ದು, ಅಮೆರಿಕದಲ್ಲಿ ನಡೆಯುವ ಶಾಪಿಂಗ್ ಮೇಳಕ್ಕಿಂತಲೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮೇಳದಲ್ಲಿ ಮೊಬೈಲ್, ಉಡುಪು, ಕಡಲ ಆಹಾರ ಸೇರಿ ಅನೇಕ ಉತ್ಪನ್ನಗಳು ಮಾರಾಟವಾಗಿವೆ.

ಚೀನಾದಲ್ಲಿ ಭಾರತೀಯ ಮಸಾಲೆ ಉತ್ಪನ್ನಗಳಿಗೆ ವಿಪರೀತ ಬೇಡಿಕೆ ಹೆಚ್ಚಾಗುತ್ತಿದ್ದು, ಆನ್‌ಲೈನ್ ಹಾಗೂ ಅಂಗಡಿಗಳಲ್ಲೆಡೆ ಇವು ಸಿಗುತ್ತವೆ. ಶಾಂಘೈ, ಗಾಂಗ್ಜೌ, ಇವು ಮತ್ತು ಬೀಜಿಂಗ್‌ಗಳ ಅಂಗಡಿಗಳಲ್ಲಿಯೂ ಈ ಭಾರತೀಯ ಉತ್ಪನ್ನಗಳನ್ನು ಕೊಳ್ಳಬಹುದು.

Comments are closed.