ಮನೋರಂಜನೆ

ಐಶ್ವರ್ಯಾ ರೈ ಫೋಟೋ ತೆಗೆದ ಫೋಟೋಗ್ರಾಫರ್ ಮೇಲೆ ಕೋಪಗೊಂಡ ಪತಿ ಅಭಿಷೇಕ್ ! ಮುಂದೇನಾಯಿತು…?

Pinterest LinkedIn Tumblr

ಮುಂಬೈ: ಐಶ್ವರ್ಯಾ ರೈ ಬಚ್ಚನ್ ಹೋದಲ್ಲೆಲ್ಲಾ ಕ್ಯಾಮರಾ ಕಣ್ಣು ಕ್ಲಿಕ್ಕಿಸುವುದು ಸಾಮಾನ್ಯ. ಆದರೆ ಇತ್ತೀಚೆಗೆ ಪಾರ್ಟಿಯಿಂದ ಮರಳುತ್ತಿದ್ದ ಐಶ್ವರ್ಯಾ ಫೋಟೋ ತೆಗೆದ ಕ್ಯಾಮರಾ ಮೆನ್ ನ್ನು ಪತಿ ಅಭಿಷೇಕ್ ಪ್ರತ್ಯೇಕವಾಗಿ ‘ವಿಚಾರಿಸಿಕೊಂಡ’ ಘಟನೆ ನಡೆದಿದೆ.

ಇತ್ತೀಚೆಗಷ್ಟೇ ಬಾಲಿವುಡ್‌ ಅಂಗಳದ ಖ್ಯಾತ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಮನೆಯಲ್ಲಿ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು. ಆ ಪಾರ್ಟಿಯಲ್ಲಿ ಬಿಟೌನ್‌ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್‌ ಜೋಹರ್‌ ಮತ್ತು ಐಶ್‌ ದಂಪತಿ ಭಾಗವಹಿಸಿದ್ದರು. ಪಾರ್ಟಿ ಮುಗಿಸಿ ಮನೆಯಿಂದ ಮನೀಶ್‌ ಜತೆ ಹೊರಬಂದ ಐಶ್‌ ಸಖತ್ತಾದ ಚಿಕ್‌ ಡೆನಿಮ್‌ ಡ್ರೆಸ್‌ ತೊಟ್ಟಿದ್ದರು.

ಆದರೆ ಐಶ್‌ ಕಾರು ಹತ್ತುವ ಸಂದರ್ಭದಲ್ಲಿ ಮುಜುಗರಕ್ಕೀಡಾದ ಘಟನೆ ನಡೆಯಿತು. ಐಶ್ವರ್ಯ ತೊಟ್ಟ ಡ್ರೆಸ್‌ನಿಂದಾಗಿ ಕಾರು ಹತ್ತುವ ವೇಳೆ ಅವರ ಕಾಲು ಹಾಗೂ ತೊಡೆಯ ಭಾಗ ಕಾಣಿಸಿಕೊಂಡಿತು. ಈ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ಛಾಯಾಗ್ರಾಹಕನನ್ನು ಗುರುತಿಸಿದ ಅಭಿಷೇಕ್‌, ತಮ್ಮ ಬಳಿ ಬರುವಂತೆ ಹೇಳಿ ಬುದ್ಧಿವಾದ ಹೇಳಿದಂತಿತ್ತು.

‘ಹೀಗೇಕೆ ಮಾಡಿದೆ?’ ಎಂದು ಕೇಳಿದ ಅಭಿಷೇಕ್‌ಗೆ ಛಾಯಾಗ್ರಾಹಕ ವಿನಮ್ರವಾಗಿ ಉತ್ತರಿಸಿದ. ‘ನಾನು ಐಶ್‌ ಅವರ ಯಾವುದೇ ಅಸಭ್ಯ ಫೋಟೋ ಕ್ಲಿಕ್ಕಿಸಿಲ್ಲ. ಬೇಕಾದರೆ ಕ್ಯಾಮೆರಾ ನೋಡಿ’ ಎಂದು ಸಮಜಾಯಿಷಿ ನೀಡಿದ. ಇದಾದ ಬಳಿಕ ತಣ್ಣಗಾದ ಅಭಿಷೇಕ್‌, ‘ಮತ್ತೊಮ್ಮೆ ಹೀಗೆ ಮಾಡಬೇಡ’ ಎಂದು ಛಾಯಾಗ್ರಾಹಕನಿಗೆ ಹೇಳುತ್ತ ಕಾರು ಚಲಾಯಿಸಿದರು.

Comments are closed.