ಮನೋರಂಜನೆ

ಅನುಷ್ಕಾ ಶೆಟ್ಟಿಯ ಕನಸಿನ ರಾಜಕುಮಾರ ಯಾರು ? ಕ್ರಿಕೆಟಿಗನ ಹೆಸರನ್ನು ಬಿಚ್ಚಿಟ್ಟ ನಟಿ…

Pinterest LinkedIn Tumblr

ಕ್ರಿಕೆಟರ್‌ಗಳ ಬಗ್ಗೆ ನಮ್ಮ ದೇಶದಲ್ಲಿ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಅಭಿಮಾನಿಗಳಿದ್ದಾರೆ. ಕೊಹ್ಲಿ, ಪಾಂಡ್ಯ, ಬುಮ್ರಾ, ಭುವನೇಶ್ವರ್ ನಂತಹ ಯುವ ಆಟಗಾರರಿಗೆ ಮಹಿಳಾ ಅಭಿಮಾನಿಗಳೇ ಅಧಿಕ. ಇದಕ್ಕೂ ಮೊದಲು ಸಚಿನ್, ಗಂಗೂಲಿ, ದ್ರಾವಿಡ್, ಧೋನಿ ಮುಂತಾದ ಕ್ರಿಕೆಟಿಗರನ್ನು ಅದೆಷ್ಟೋ ಮಂದಿ ತಮ್ಮ ಕನಸಿನ ರಾಜಕುಮಾರನಂತೆ ಊಹಿಸಿಕೊಳ್ಳುತ್ತಿದ್ದರು.

ಇತ್ತೀಚೆಗೆ ಬಾಲಿವುಡ್ ಬೆಡಗಿ ಕೈರಾ ಅಡ್ವಾಣಿ ಮಾತನಾಡುತ್ತಾ, ಮಹೇಂದ್ರ ಸಿಂಗ್ ಧೋನಿ ಜತೆ ಡೇಟಿಂಗ್ ಮಾಡಬೇಕೆಂದು, ಅವರ ಜತೆ ಬೈಕ್‌ನಲ್ಲಿ ಸುತ್ತಬೇಕೆಂಬ ಬಯಕೆ ಇತ್ತೆಂದು ಹೇಳಿಕೊಂಡಿದ್ದರು. ಇದೀಗ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ತಾನು ಅಭಿಮಾನಿಸುವ ಕ್ರಿಕೆಟರ್ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಅಷ್ಟೇ ಅಲ್ಲದೆ ತಾನು ಒಂದಾನೊಂದು ಸಮಯದಲ್ಲಿ ಆ ಕ್ರಿಕೆಟರ್ ಜತೆ ಪ್ರೀತಿಯಲ್ಲೂ ಬಿದ್ದಿದ್ದಾಗಿ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಆ ಕ್ರಿಕೆಟರ್ ಯಾರು ಎಂದುಕೊಂಡಿದ್ದೀರಿ? ಈಗ ಅನುಷ್ಕಾ ಆ ರಾಜಕುಮಾರನ ಬಗ್ಗೆ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಅನುಷ್ಕಾರನ್ನು ನಿಮ್ಮ ಅಭಿಮಾನ ಕ್ರಿಕೆಟರ್ ಯಾರು ಎಂದು ಪ್ರಶ್ನಿಸಿದ್ದಕ್ಕೆ, ‘ರಾಹುಲ್ ದ್ರಾವಿಡ್ ನನ್ನ ಅಭಿಮಾನ ಕ್ರಿಕೆಟರ್. ಚಿಕ್ಕಂದಿನಿಂದ ಅವರೆಂದರೆ ನನಗೆ ಹುಚ್ಚು ಪ್ರೀತಿ. ಅದು ಎಷ್ಟರ ಮಟ್ಟಿಗೆ ಇತ್ತೆಂದರೆ ದ್ರಾವಿಡ್ ಜತೆಗೆ ಸಂಪೂರ್ಣವಾಗಿ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೆ’ ಎಂದಿದ್ದಾರೆ. ಸದ್ಯಕ್ಕೆ ರಾಹುಲ್ ದ್ರಾವಿಡ್ ಭಾರತ ಎ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Comments are closed.