ಮನೋರಂಜನೆ

ವಿಶ್ವದ ಮೋಸ್ಟ್‌ ಪವರ್‌ಪುಲ್‌ ಮಹಿಳೆಯರಲ್ಲಿ ಪ್ರಿಯಾಂಕಾ

Pinterest LinkedIn Tumblr


ಹೊಸದಿಲ್ಲಿ : ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ದೇಶಕ್ಕೆ ಖ್ಯಾತಿ ತಂದಿಟ್ಟಿದ್ದು,ಫೋರ್ಬ್ಸ್ ಬಿಡುಗಡೆ ಮಾಡಿರುವ 2017 ನೇ ಸಾಲಿನ ವಿಶ್ವದ ಮೋಸ್ಟ್‌ ಪವರ್‌ಪುಲ್‌ ಮಹಿಳೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಪ್ರಿಯಾಂಕಾ 97 ನೇ ಸ್ಥಾನ ಪಡೆದುಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ನಟಿಯಾಗಿ ಮಾಡಿದ ಸಾಧನೆಗಳು ಮತ್ತು ಸೇವಾ ಕಾರ್ಯಗಳು ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಳ್ಳುವಂತೆ ಮಾಡಿವೆ.

ಮೊದಲ ಸ್ಥಾನವನ್ನು ಜರ್ಮನಿಯ ಚಾನ್ಸೆಲರ್‌ ಆಂಜೆಲಾ ಮಾರ್ಕೆಲ್‌, 2 ನೇ ಸ್ಥಾನವನ್ನು ಇಂಗ್ಲೆಂಡ್‌ ಪ್ರಧಾನಿ ಥೆರೆಸಾ ಮೇ , 3ನೇ ಸ್ಥಾನವನ್ನು ಉದ್ಯಮಿ ಬಿಲ್‌ ಗೇಟ್ಸ್‌ ಫೌಂಡೇಷನ್‌ನ ಮೆಲಿಂಡಾ ಗೇಟ್ಸ್‌ ಅವರು ಪಡೆದಿದ್ದಾರೆ.

ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಭಾರತೀಯ ಸಾಧಕಿಯರೆಂದರೆ ಚಂದಾ ಕೋಛಾರ್‌, ರೋಶ್ನಿ ನಾಡಾರ್‌ ಮಲ್ಹೋತ್ರ , ಕಿರಣ್‌ ಮಜೂಮ್ದಾರ್‌ ಶಾ ,ಶೋಭನಾ ಭಾರ್ತಿಯಾ .

-ಉದಯವಾಣಿ

Comments are closed.