ಮನೋರಂಜನೆ

ಬಿಗ್ ಬಾಸ್ ಸ್ಪರ್ಧಿ ರಾದ್ಧಾಂತ; ಹನ್ಸಿಕಾ ತರಾಟೆ

Pinterest LinkedIn Tumblr


ಬಾಲಿವುಡ್ ಕಿರುತೆರೆ ನಟಿ ಹಿನಾ ಖಾನ್ ದಕ್ಷಿಣದ ನಟಿಯರ ಬಗ್ಗೆ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ಸೀಸನ್ 11ರಲ್ಲಿ ಹಿನಾ ಖಾನ್ ಸ್ಪರ್ಧಿ. ಶೋನಲ್ಲಿ ಒಂದು ಸಂದರ್ಭದಲ್ಲಿ ಮಾತನಾಡುತ್ತಾ ದಕ್ಷಿಣದ ತಾರೆಗಳ ಬಗ್ಗೆ ಕೀಳಾಗಿ ಮಾತನಾಡಿ ಟೀಕೆಗೆ ಗುರಿಯಾಗಿದ್ದಾರೆ.

‘ಪ್ರೇಕ್ಷಕರನ್ನು ಆಕರ್ಷಿಸಲು ಅವರು ಎಕ್ಸ್‌ಪೋಸಿಂಗ್ ಮಾಡಬೇಕಾಗಿರುತ್ತದೆ. ಅಂತಹವರನ್ನೇ ಪ್ರೇಕ್ಷಕರು ಇಷ್ಟಪಡುತ್ತಾರೆ’ ಎಂದಿದ್ದಾರೆ. ಹಿನಾ ಖಾನ್ ಹೇಳಿಕೆ ಬಗ್ಗೆ ಟ್ವಿಟ್ಟರ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೀನಾ ಖಾನ್‌ರನ್ನು ದಕ್ಷಿಣದ ಹೀರೋಯಿನ್ ಹನ್ಸಿಕಾ ಮೋಟ್ವಾನಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಇದರ ಅರ್ಥ ಏನು? ದಕ್ಷಿಣದ ಚಿತ್ರೋದ್ಯಮವನ್ನು ಅವರು ಅಷ್ಟು ಕೀಳಾಗಿ ಹೇಗೆ ಮಾತನಾಡುತ್ತಾರೆ. ಬಹಳಷ್ಟು ಮಂದಿ ಬಾಲಿವುಡ್ ನಟಿಯರು ಇಲ್ಲಿ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂಬ ಸಂಗತಿ ಅವರಿಗೆ ಗೊತ್ತಿಲ್ಲವೆ? ನಮ್ಮ ಬಗ್ಗೆ ಕೀಳಾಗಿ ಮಾತನಾಡಿರುವ ಹಿನಾ ಖಾನ್‌‌ಗೆ ನಾಚಿಕೆಯಾಗಬೇಕು. ದಕ್ಷಿಣದ ತಾರೆಯಾಗಿ ಈ ಚಿತ್ರೋದ್ಯಮಕ್ಕೆ ಸಂಬಂಧಿಸಿದ ನಟಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಅನ್ನಿಸುತ್ತದೆ. ಹಿನಾ ಖಾನ್ ಹೇಳಿಕೆ ಕೆಲಸಕ್ಕೆ ಬಾರದ್ದು’ ಎಂದು ಹನ್ಸಿಕಾ ಸಾಲುಸಾಲು ಟ್ವೀಟ್‌ಗಳನ್ನು ಮಾಡಿದ್ದಾರೆ.

ಹಿನಾ ಖಾನ್‌ರ ಹೇಳಿಕೆಗೆ ಇನ್ನೊಬ್ಬ ತಾರೆ ಖುಷ್ಬು ಸಹ ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ. ‘ಗೌರವಯುತವಾಗಿ ಇರುವುದು ಹೇಗೆ ಎಂಬ ಪಾಠಗಳನ್ನು ಇವರಿಗೆ ದಕ್ಷಿಣದಿಂದ ಕಲಿಸಬೇಕಾಗಿದೆ… ಅದಕ್ಕೆ ಇವರು ಅಲ್ಲೇ ಇರುವುದು… ನಮ್ಮ ಹುಡುಗಿಯರು ಮುನ್ನುಗ್ಗುತ್ತಿರುವುದು’ ಎಂದಿದ್ದಾರೆ.

Comments are closed.