ರಾಷ್ಟ್ರೀಯ

​ಜಯಾ ಸಾವಿಗೆ ಸಂಬಂಧಿಸಿದ ಮಾಹಿತಿಯಿದ್ದರೆ ಕೊಡಿ: ತನಿಖಾ ಆಯೋಗ

Pinterest LinkedIn Tumblr


ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ಯಾರಲ್ಲಾದರೂ ಮಾಹಿತಿ ಇದ್ದಲ್ಲಿ ನವೆಂಬರ್‌ 22ರೊಳಗೆ ಸಲ್ಲಿಸುವಂತೆ ನ್ಯಾ.ಮೂ. ಆರ್ಮುಗ ಸ್ವಾಮಿ ಅವರ ನೇತೃತ್ವದ ಏಕಸದಸ್ಯ ಆಯೋಗ ಸಾರ್ವಜನಿಕರನ್ನು ಕೋರಿದೆ.

ಜಯಾ ಅವರ ವೈಯಕ್ತಿಕ ಮಾಹಿತಿ ಇದ್ದವರು, ಅವರ ಜತೆ ನೇರ ಸಂಪರ್ಕ ಹೊಂದಿದ್ದವರು ಸೂಕ್ತ ದಾಖಲೆಗಳೊಂದಿಗೆ ಹಂಚಿಕೊಂಡು ತನಿಖೆಗೆ ಸಹಕರಿಸಬೇಕು ಎಂದು ನ್ಯಾ.ಮೂ.ಆರ್ಮುಗ ಸ್ವಾಮಿ ಕೇಳಿಕೊಂಡಿದ್ದಾರೆ.

ಆಯೋಗವು ಜಯ ಲಲಿತಾ ಚಿಕಿತ್ಸೆ ಪಡೆಯುತ್ತಿದ್ದ ಅಪೊಲೊ ಆಸ್ಪತ್ರೆಯ ವೈದ್ಯರನ್ನು ಕರೆಸಿ ವಿಚಾರಣೆ ನಡೆಸಲಿದೆ. ಅಗತ್ಯವಾದಲ್ಲಿ ಸತ್ಯ ಬಾಯ್ಬಿಡಿಸಲು ಬೇರೆ ಕ್ರಮಗಳನ್ನು ಕೂಡ ಕೈಗೊಳ್ಳಲಿದೆ.

ತನಿಖಾ ಆಯೋಗದ ಕಚೇರಿಯು ಕಲಾಸ್‌ ಮಹಲ್‌ ಹೆರಿಟೇಜ್‌ ಬಿಲ್ಡಿಂಗ್‌ನಲ್ಲಿದೆ. ಅಲ್ಲಿಗೆ ಖುದ್ದು ಆಗಮಿಸಿ ಇಲ್ಲವೇ ಅಂಚೆ ಮೂಲಕ ಮಾಹಿತಿ ಸಲ್ಲಿಸಬಹುದಾಗಿದೆ.

Comments are closed.