ಮನೋರಂಜನೆ

ಬಹುಭಾಷಾ ತಾರೆ ಆಸಿನ್‌ಗೆ ಹೆಣ್ಣು ಮಗು

Pinterest LinkedIn Tumblr


ಹೊಸದಿಲ್ಲಿ: ದಕ್ಷಿಣ ಭಾರತದ ಖ್ಯಾತ ನಟಿ, ಮಲಯಾಳ ಬೆಡಗಿ ಆಸಿನ್ ತೊಟ್ಟುಮಾಕಳ್, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮೈಕ್ರೋಮ್ಯಾಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು ವರಿಸಿಕೊಂಡಿದ್ದ ಆಸಿನ್ ಈಗ ತಾಯಿಯಾಗಿದ್ದಾರೆ.

31 ವರ್ಷದ ಆಸಿನ್ ತಮಿಳು, ತೆಲುಗು ಹಾಗೂ ಬಾಲಿವುಡ್‌ನಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ್ದ ಗಜನಿ ಚಿತ್ರ ಹೆಚ್ಚು ಜನಪ್ರಿಯತೆ ಗಳಿಸಿತ್ತು.

ದೀರ್ಘ ಕಾಲದ ಪ್ರಿಯಕರ ರಾಹುಲ್ ಜತೆಗಿನ ವಿವಾಹನ 2016 ಜನವರಿ 19ರಂದು ನಡೆದಿತ್ತು.

ಇತರೆಲ್ಲ ನಟಿಯರಿಗಿಂತ ವಿಭಿನ್ನವಾಗಿ ಆಸಿನ್ ಗರ್ಭಿಣಿಯಾದ ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲೇ ಇಲ್ಲ. ಈ ಮೂಲಕ ಹೆಚ್ಚು ಸಂಪ್ರದಾಯಿಕತೆಯನ್ನು ಮೆರೆದಿದ್ದರು.

Comments are closed.