ಮನೋರಂಜನೆ

‘ಸಲ್ಮಾನ್ ಖಾನ್ ಬಾಡಿಗಾರ್ಡ್ ನಿಂದ ಮಹಿಳೆಗೆ ಗ್ಯಾಂಗ್ ರೇಪ್ ಬೆದರಿಕೆ’

Pinterest LinkedIn Tumblr


ಮುಂಬೈ: ತಾನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಎಂದು ಹೇಳಿಕೊಂಡಿರುವ 31 ವರ್ಷದ ವ್ಯಕ್ತಿ, ಬಾಂದ್ರಾದ ಮಹಿಳೆಯೊಬ್ಬರಿಗೆ ಕರೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಸಂಬಂಧ ಮಹಿಳೆ ಖಾರ್ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರ ಮೇಲೆ ಐಪಿಸಿ ಸೆಕ್ಷೆನ್ 509ರಡಿ ಎಫ್ಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಖಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ರಾಮಚಂದ್ರ ಜಾಧವ್ ಅವರು ಹೇಳಿದ್ದಾರೆ.

ದೂರಿನ ಪ್ರಕಾರ, ಮಹಿಳೆಯ ಎನ್ ಜಿಒ ಸಂಸ್ಥೆ ನಡೆಸುತ್ತಿದ್ದು, ನಿನ್ನೆ ಮಧ್ಯಾಹ್ನ ವ್ಯಕ್ತಿಯೊಬ್ಬರು ಆಕೆಯ ಮೊಬೈಲ್ ಗೆ ಕರೆ ಮಾಡಿ, ನಟ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಎಂದು ಹೇಳಿಕೊಂಡು ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಜಾಧವ್ ಅವರು ತಿಳಿಸಿದ್ದಾರೆ.

ಬಾಡಿಗಾರ್ಡ್ ತನ್ನನ್ನು ಅಶ್ಲೀಲವಾಗಿ ನಿಂದಿಸಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು. ಮಹಿಳೆಗೆ ಕರೆ ಮಾಡಿದ ಮೊಬೈಲ್ ನಂಬರ್ ಯಾರು ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಜಾಧವ್ ಹೇಳಿದ್ದಾರೆ.

Comments are closed.