ಮನೋರಂಜನೆ

ನಂದಿನಿ ಇನ್ನು ಮುಂದೆ ಒಂದು ಗಂಟೆ ಧಾರಾವಾಹಿ

Pinterest LinkedIn Tumblr


ಉದಯ ಟಿವಿಯ ನಂದಿನಿ ಧಾರಾವಾಹಿ ಜನಮನ್ನಣೆಯನ್ನು ಗಳಿಸಿ, ಇನ್ನೂರು ಕಂತುಗಳತ್ತ ದಾಪುಗಾಲಿಡುತ್ತಿದೆ. ಈ ಧಾರಾವಾಹಿಯ ಅಪಾರ ಯಶಸ್ಸು ಇದೀಗ ಹೊಸದೊಂದು ವಿಶೇಷಕ್ಕೆ ಮುನ್ನುಡಿ ಬರೆದಿದೆ. ಇದೇ 23ನೇ (ಸೋಮವಾರ)ದಿಂದ ಒಂದು ಗಂಟೆಗಳ ಸಂಚಿಕೆಯಾಗಿ ಮೂಡಿಬರಲಿದೆ.

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಎಂಟರಿಂದ ಒಂಬತ್ತು ಗಂಟೆಯವರೆಗೆ ನಂದಿನಿ ಪ್ರಸಾರವಾಗಲಿದೆ. ಇನ್ನೂ ಹೆಚ್ಚಿನ ಕೌತುಕ, ಅಚ್ಚರಿಗಳೊಡನೆ ನಂದಿನಿ ಮೂಡಿಬರಲಿದೆ. ನಂದಿನಿಯ ಸಮಯದ ಬದಲಾವಣೆಯ ಜೊತೆಗೆ, ಇನ್ನು ಮುಂದೆ ಸರಯೂ ಸಂಜೆ ಏಳರ ಬದಲಾಗಿ, ಸೋಮವಾರದಿಂದ ಶುಕ್ರವಾರ ರಾತ್ರಿ ಹತ್ತು ಗಂಟೆಗೆ ಪ್ರಸಾರವಾಗಲಿದೆ.

ಕಾವೇರಿ ಧಾರಾವಾಹಿ ರಾತ್ರಿ ಎಂಟರ ಬದಲಾಗಿ ಏಳು ಗಂಟೆಗೆ ಮೂಡಿಬರಲಿದೆ. ಹೊಸ ವೈವಿಧ್ಯಮಯ ಸಂಚಿಕೆಗಳೊಡನೆ ಮೂಡಿ ಬರಲಿರುವ ಈ ಎಲ್ಲ ಧಾರಾವಾಹಿಗಳು ವೀಕ್ಷಕರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ ಎನ್ನುವುದು ಉದಯ ಟಿವಿಯ ಅನಿಸಿಕೆ.

Comments are closed.