
ವಿಲಿಯಂ ಶೇಕ್‌ಸ್ಪಿಯರ್ ಅವರ ಜನಪ್ರಿಯ ನಾಟಕವಾದ “ಮ್ಯಾಕ್‌ಬೆತ್’ ಇದೀಗ ಕನ್ನಡದಲ್ಲಿ ಸಜ್ಜಾಗುತ್ತಿದೆ. “ಸಂಹಾರ’ ಚಿತ್ರದ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಕಾಯುತ್ತಿರುವ ನಿರ್ದೇಶಕ ಗುರು ದೇಶಪಾಂಡೆ, ಶೇಕ್‌ಸ್ಪಿಯರ್ ವಿರಚಿತ “ಮ್ಯಾಕ್‌ಬೆತ್’ ಆಧರಿಸಿ, ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ಠಾಕ್ರೆ’ ಎಂಬ ಹೆಸರನ್ನೂ ಇಟ್ಟಿದ್ದಾರೆ.
ಹೌದು, “ಮ್ಯಾಕ್‌ಬೆತ್’ ಆಧರಿಸಿ “ಠಾಕ್ರೆ’ ನಿರ್ಮಾಣವಾಗುತ್ತಿದ್ದು, ಪ್ರಜ್ವಲ್ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಪೂಜೆಯಾಗಿದ್ದು, ಡಿಸೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಸಹ ಪ್ರಮುಖ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ರವಿಚಂದ್ರನ್ ನಟಿಸುವುದು ಇನ್ನೂ ಪಕ್ಕಾ ಆಗಿಲ್ಲ. ಮುಂದಿನ ತಿಂಗಳು ಇತರೆ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ನಡೆಯಲಿದೆ.
ಈ ಹಿಂದೆ ಶೇಕ್‌ಸ್ಪಿಯರ್ ವಿರಚಿತ “ಟೇಮಿಂಗ್ ಆಫ್ ದಿ ಶ್ರೂ’ ನಾಟಕವು “ಅಬ್ಟಾ ಆ ಹುಡುಗಿ’ ಎಂಬ ಹೆಸರಲ್ಲಿ ಚಿತ್ರವಾಗಿತ್ತು. ನಂತರ “ಕಾಮಿಡಿ ಆಫ್ ಎರರ್’ ನಾಟಕವು “ಉಲ್ಟಾ-ಪಲ್ಟಾ’ ಚಿತ್ರವಾಗಿತ್ತು. ಇದೀಗ “ಮ್ಯಾಕ್‌ಬೆತ್’ ಕನ್ನಡದಲ್ಲಿ “ಠಾಕ್ರೆ’ಯಾಗಿ ಬರಲಿದೆ. ಹಿಂದೆ ಇದೇ ನಾಟಕದಿಂದ ಸ್ಫೂರ್ತಿ ಪಡೆದು ಹಿಂದಿಯಲ್ಲಿ “ಮಖ್ಬೂಲ್’ ಎಂಬ ಚಿತ್ರ ನಿರ್ಮಾಣವಾಗಿತ್ತು.
-ಉದಯವಾಣಿ
Comments are closed.