ಮನೋರಂಜನೆ

ಈತ ಕರೀನಾ ಕಪೂರ್ ಜೊತೆ ಸಂಬಂಧ ಹೊಂದಿದ್ದನಂತೆ !

Pinterest LinkedIn Tumblr

ನವದೆಹಲಿ: ನಟಿ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ವಿರುದ್ಧ ಹರಿಹಾಯ್ದಿದ್ದ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಲ್ ರಶೀದ್ ಖಾನ್ (ಕೆಆರ್ ಕೆ)ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಬಾಲಿವುಡ್ ನಟಿ ಕರೀನಾ ಕಪೂರ್ ಜೊತೆ ನಾನು ನಾಲ್ಕು ವರ್ಷ ಸಂಬಂಧ ಹೊಂದಿದ್ದೆ ಎಂದು ಹೇಳಿಕೊಂಡು ಕರೀನಾ ಜೊತೆಗಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಾಲ್ಕು ವರ್ಷಗಳ ಕಾಲ ಕರೀನಾ ಕಪೂರ್ ಜೊತೆ ಸಂಬಂಧ ಹೊಂದಿದ್ದೆ, ಇದನ್ನು ಸಾಬೀತು ಪಡಿಸಲು ನನ್ನ ಬಳಿ ಈ ಸಂಬಂಧ ಸಾಕ್ಷಿಯಾಗಿ ಈ ಫೋಟೋ ಮಾತ್ರ ಇದೆ ಎಂದು ಬರೆದು ಕೊಂಡಿದ್ದಾರೆ.

ಹೃತಿಕ್ ರೋಷನ್ ಮತ್ತು ಕಂಗನಾ ಸಂಬಂಧದ ಬಗ್ಗೆ ಆಕೆ ಸಹೋದರಿ ರಂಗೋಲಿ ಶೇರ್ ಮಾಡಿದ್ದ ಪೋಸ್ಟ್ ಗಳ ವಿರುದ್ಧ ಕೆಆರ್ ಕೆ ಕಾಮೆಂಟ್ ಮಾಡಿದ್ದರು. ಕಂಗನಾ ಮತ್ತು ಹೃತಿಕ್ ನಡುವೆ ಕಾನೂನು ಹೋರಾಟ ನಡೆಯುತ್ತಿದೆ.

Comments are closed.