ಅಂತರಾಷ್ಟ್ರೀಯ

ಹುಟ್ಟಿದ ಮಗುವಿನ ತೂಕ ನೋಡಿ ಶಾಕ್ ಗೊಂಡ ಮಹಿಳೆ

Pinterest LinkedIn Tumblr

ಗಂಡು ಮಗುವಿಗೆ ಜನ್ಮ ನೀಡಿದ ವಿಯೆಟ್ನಾಂನ ಮಹಿಳೆಯೊಬ್ಬಳಿಗೆ ತನ್ನ ಮಗುವನ್ನು ನೋಡಿ ಆದ ಶಾಕ್‌ ಅಷ್ಟಿಷ್ಟಲ್ಲವಂತೆ. ಒಂದು ಕ್ಷಣ ಆಕೆ ಇದು ನನ್ನ ಮಗುವೇ ಅಲ್ಲ ಎಂಬ ತೀರ್ಮಾನಕ್ಕೂ ಬಂದಿದ್ದಳಂತೆ. ಕಾರಣ ಮಗು 7.1 ಕೇಜಿ ತೂಕ ಇತ್ತು.

ಸಾಮಾನ್ಯವಾಗಿ ಹುಟ್ಟಿದ ಮಕ್ಕಳು 2.5ರಿಂದ 3.5 ಕೇಜಿ ತೂಕ ಇರುತ್ತವೆ. ಆದರೆ ಇದು ದುಪ್ಪಟ್ಟು ತೂಕ ಹೊಂದಿದೆ. ಈ ಮಗು ಆಗ್ನೇಯ ಏಷ್ಯಾದಲ್ಲೇ ಹೆಚ್ಚು ತೂಕದ ನವಜಾತ ಶಿಶು ಎಂಬ ದಾಖಲೆಯೂ ಬರೆದಿದೆ. ಮಗು ಆರೋಗ್ಯಪೂರ್ಣವಾಗಿದೆ ಎಂದು ವೈದ್ಯರು ಹೇಳಿದ್ದಾಗಿ ಮಗುವಿನ ತಂದೆ ಟ್ರಾನ್‌ ವ್ಯಾನ್‌ ಕ್ವಾನ್‌ ತಿಳಿಸಿದ್ದಾರೆ.

Comments are closed.