ಮನೋರಂಜನೆ

ಫಿಲ್ಲೌರಿ ಚಿತ್ರ ನಿರ್ಮಾಣಕ್ಕೆ ಕೊಹ್ಲಿ ಹೂಡಿಕೆ ಇಲ್ಲ: ಅನುಷ್ಕಾ

Pinterest LinkedIn Tumblr


ಮುಂಬೈ: ಬಾಲಿವುಡ್‌ ಬೆಡಗಿ ಅನುಷ್ಕಾ ಶರ್ಮಾ ನಿರ್ಮಾಣದ ಮುಂಬರುವ ಚಿತ್ರ ‘ಫಿಲ್ಲೌರಿ‘ ಚಿತ್ರಕ್ಕೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಣ ಹೂಡಿಕೆ ಮಾಡಿಲ್ಲ ಎಂದಿದ್ದಾರೆ.

ಅನುಷ್ಕಾ ಅವರು ನಿರ್ಮಿಸಿ, ನಟಿಸಿರುವ ಚಿತ್ರ ಬಿಡುಗಡೆ ಹಂತದಲ್ಲಿದ್ದು, ಈ ಚಿತ್ರಕ್ಕೆ ಅವರ ಗೆಳೆಯ ವಿರಾಟ್‌ ಕೊಹ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂಬ ಸುದ್ದಿ ಕೆಲದಿನದಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇದಕ್ಕೆ ಶನಿವಾರ ಸ್ಪಷ್ಟನೆ ನೀಡಿದ ಅನುಷ್ಕಾ, ‘ಇದು ನಾನು ನಿರ್ಮಿಸುತ್ತಿರುವ ಎರಡನೇ ಚಿತ್ರ. ನಮ್ಮದೇ ಬ್ಯಾನರ್‌ ಅಡಿ (ಕ್ಲೀನ್‌ ಸ್ಲೇಟ್‌) ಚಿತ್ರ ನಿರ್ಮಾಣವಾಗಿದೆ ಮತ್ತು ಫಾಕ್ಸ್‌ ಸ್ಟಾರ್‌ ಹಿಂದಿ ಸಹ ನಿರ್ಮಾಣ ಮಾಡಿದೆ’ ಎಂದಿದ್ದಾರೆ.

Anushka Sharma ✔ @AnushkaSharma
Putting to rest some rumours that have been doing the rounds for some days now
8:22 PM – 10 Feb 2017
1,049 1,049 Retweets 5,004 5,004 likes
ಮಾಧ್ಯಮಗಳ ವಿರುದ್ಧ ಹರಿಹಾಯ್ದಿರುವ ಅನುಷ್ಕಾ, ಸುದ್ದಿ ನೀಡುವಾಗ ಅದರ ಬಗ್ಗೆ ಕೂಲಂಕಷ ಮಾಹಿತಿ ಕಲೆ ಹಾಕಿ ನಂತರ ಬರೆಯಿರಿ ಎಂದು ಗುಡುಗಿದ್ದಾರೆ.

ಈ ರೀತಿಯ ಸುದ್ದಿಗಳು ನಟರ ತೇಜೋವಧೆ ಮಾಡುತ್ತವೆ. ತುಂಬಾ ವರ್ಷಗಳಿಂದ ಕಷ್ಟಪಟ್ಟು ಕೆಲಸ ಮಾಡಿದ್ದು ವ್ಯರ್ಥ ಅನಿಸುತ್ತಿದೆ ಎಂದು ಅವರು ಬೇಸಕ ವ್ಯಕ್ಪಡಿಸಿದ್ದಾರೆ.

ಈ ರೀತಿಯ ಸುದ್ದಿಗಳಿಗೆ ಅನುಷ್ಕಾ, ವಿರಾಟ್‌ ಗೆಳೆತನವೇ ಕಾರಣವಾಗಿದೆ. ಅಲ್ಲದೇ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನುಷ್ಕಾರೊಂದಿಗೆ ವಿರಾಟ್‌ ನಿಶ್ಚಿತಾರ್ಥವಾಗಿದೆ ಎಂಬ ಸುಳ್ಳು ಸುದ್ದಿಯಿಂದ ಈ ವದಂತಿ ಸೃಷ್ಟಿಯಾಗಿದೆ ಎಂದು ಮುಂಬೈನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Comments are closed.