ಮನೋರಂಜನೆ

ಅರೆ ಕೊಳೆತ ಸ್ಥಿತಿಯಲ್ಲಿ ನಟಿಯ ಶವ!

Pinterest LinkedIn Tumblr


ದಕ್ಷಿಣ ಕೋಲ್ಕತ್ತಾದ ಕಸ್ಬಾ ಪ್ರದೇಶದ ಫ್ಲ್ಯಾಟ್`ನಲ್ಲಿ ಬೆಂಗಾಲಿ ನಟಿ ಬಿಟಾಸ್ಟಾ ಸಹಾ ಅವರ ಅರೆ ಕೊಳೆತ ಶವ ಪತ್ತೆಯಾಗಿದೆ. ಫ್ಯಾನ್`ಗೆ ನೇಣು ಬಿಗಿದ ಸ್ಥಿತಿಯಲ್ಲಿ ನಟಿಯ ಶವ ಪತ್ತೆಯಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ನಟಿಯ ತಾಯಿ ಕಳೆದೆರಡು ದಿನಗಳಿಂದ ಪದೇ ಪದೇ ಕರೆಮಾಡಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಗಾಬರಿಗೊಂಡು ತಾಯಿ ನೇರ ಫ್ಲ್ಯಾಟ್`ಗೆ ಬಂದಿದ್ದಾರೆ. ಪದೇ ಪದೇ ಬಾಗಿಲು ಬಡಿದರೂ ಬಿಟಾಸ್ಟಾ ಬಾಗಿಲು ತೆರೆಯದಾಗ ತಾಯಿ ಮತ್ತು ಸ್ಥಳೀಯರು ಪೊಲೀಸರ ನೆರವಿನೊಂದಿಗೆ ಬಾಗಿಲು ಒಡೆದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ವರದಿ ಪ್ರಕಾರ ನಟಿಯ ಎಡಗೈ ಮಣಿಕಟ್ಟಿಗೆ ಸ್ವಲ್ಪ ಗಾಯವಾಗಿದೆ. ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು, ನಟಿಯ ಸೋಶಿಯಲ್ ಮೀಡಿಯಾ ಮೆಸೇಜ್, ಮೊಬೈಲ್ ಸಂದೇಶ, ಮಾನಸಿಕ ಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Comments are closed.