ಕ್ರೀಡೆ

ಕೊನೆಗೂ ಪತಿ ಕುರಿತು ಬಾಯಿಬಿಟ್ಟ ಸಾನಿಯಾ!

Pinterest LinkedIn Tumblr


ಹೈದರಾಬಾದ್: ಸಾನಿಯಾ ಮಿರ್ಜಾ ಮತ್ತು ಆಕೆಯ ಪಾಕ್ ಮೂಲದ ಪತಿ ಶೊಯೇಬ್ ಮಲಿಕ್ ಸಂಬಂಧದ ಬಗ್ಗೆ ಹಲವು ಗಾಸಿಪ್ ಗಳು ಬಂದಿವೆ. ಆದರೆ ಟೆನಿಸ್ ತಾರೆ ಎಲ್ಲೂ ಏನನ್ನೂ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ತಮ್ಮಿಬ್ಬರ ಸಂಬಂಧದ ಬಗ್ಗೆ ಮೊದಲ ಬಾರಿಗೆ ಹೊರ ಜಗತ್ತಿಗೆ ಹೇಳಿಕೊಂಡಿದ್ದಾರೆ.

ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಾವಿಬ್ಬರೂ ಹೆಚ್ಚಾಗಿ ಬೇರೆ ಬೇರೆ ಇರುತ್ತೇವೆ. ಹೆಚ್ಚು ಪ್ರವಾಸದಲ್ಲೇ ಕಾಲ ಕಳೆಯುತ್ತೇವೆ. ಹೀಗೆ ದೂರ ದೂರವಿರುವುದಕ್ಕೇ ನಾವು ಖುಷಿಯಾಗಿದ್ದೇವೆ ಎಂದು ಸಾನಿಯಾ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

2010 ರಲ್ಲಿ ಸಾನಿಯಾ ಶೊಯೇಬ್ ರನ್ನು ಮದುವೆಯಾಗಿದ್ದರು. ಇವರಿಬ್ಬರು ದುಬೈನಲ್ಲಿ ಸ್ವಂತ ಮನೆ ಮಾಡಿಕೊಂಡಿದ್ದರೂ, ಜತೆಯಾಗಿರುವುದೇ ಕಡಿಮೆ. ಕಾರಣ ಇಬ್ಬರದೂ ಬೇರೇ ದೇಶ, ಬೇರೇ ಕ್ರೀಡೆ. ಇದುವೇ ನಮ್ಮಿಬ್ಬರ ಪ್ರೀತಿಯ ಗುಟ್ಟು ಎನ್ನುವುದು ಸಾನಿಯಾ ಅಭಿಮತ.

Comments are closed.