ಮನೋರಂಜನೆ

ಪೋಂಜಿ ಹಗರಣ: ಸನ್ನಿಲಿಯೋನ್ ವಿಚಾರಣೆ!

Pinterest LinkedIn Tumblr


ನವದೆಹಲಿ (ಫೆ.07): ಪೋಂಜಿ ಹಗರಣದ ಪ್ರಮುಖ ಆರೋಪಿ ಅನುಭವ್ ಮಿತ್ತಲ್ ಇತ್ತೀಚಿಗೆ ನೋಯ್ಡಾದ ಕ್ರೌನೆ ಪ್ಲಾಜಾದಲ್ಲಿ ಪಾರ್ಟಿ ಆಯೋಜಿಸಿದ್ದು ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಹೋಟೆಲ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದೆ.
ಪೋಂಜಿ ಹಗರಣದ ಕಿಂಗ್ ಪಿನ್ ಅನುಭವ್ ಮಿತ್ತಲ್ ಕಳೆದ ವರ್ಷ ನ. 28 ರಂದು ಕ್ರೌನೆ ಪ್ಲಾಜಾದಲ್ಲಿ ಪಾರ್ಟಿಯನ್ನು ಆಯೋಜಿಸಿ, ಇ-ಕಾಮರ್ಸ್ ಗೆ ಸಂಬಂಧಿಸಿದ ವೆಬ್ ಸೈಟ್ ಗೆ ಚಾಲನೆ ನೀಡಲು ಸನ್ನಿಲಿಯೋನ್ ನನ್ನು ಆಹ್ವಾನಿಸಿದ್ದರು. ನಮಗೆ ಫೋಟೋ ಸಾಕ್ಷಾಧಾರಗಳು ದೊರೆತಿವೆ. ತನಿಖೆ ವೇಳೆ ಅಗತ್ಯ ಬಿದ್ದರೆ ಸನ್ನಿ ಲಿಯೋನ್ ನ್ನು ಪ್ರಶ್ನಿಸಬೇಕಾಗಬಹುದು ಎಂದು ಎಸ್’ಟಿ’ಎಫ್ ಡಿಎಸ್ಪಿ ರಾಜ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಸನ್ನಿ ಲಿಯೋನ್ ಹಾಗೂ ಅಮಿಷಾ ಪಟೇಲ್ ಆ ಈವೆಂಟ್ ನಲ್ಲಿರುವ ಫೊಟೋಗಳು ದೊರೆತಿವೆ. ಆದರೆ ಅದು ಬರ್ತ್ ಡೇ ಪಾರ್ಟಿ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

Comments are closed.