ಕರ್ನಾಟಕ

ಅಗ್ನಿ ಶ್ರೀಧರ್’ಗೆ ಲಘು ಹೃದಯಾಘಾತ!

Pinterest LinkedIn Tumblr


ಬೆಂಗಳೂರು(ಫೆ.07): ಪ್ರಗತಿಪರ ಹೋರಾಟಗಾರ ಅಗ್ನಿ ಶ್ರೀಧರ್’ಗೆ ಲಘು ಹೃದಯಾಘಾತವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಡಬಗೆರೆ ಸೀನನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್​ನಲ್ಲಿರುವ ಶ್ರೀಧರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರ ವಿಚಾರಣೆ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಗ ಲಘು ಹೃದಯಾಘಾತವಾಗಿದೆ. ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಸೀನನ ಹತ್ಯೆ ಆರೋಪಿ ರೋಹಿತ್ ಅಲಿಯಾಸ್ ಒಂಟೆಯು ಶ್ರೀಧರ್ ಅವರ ಮನೆಯಲ್ಲಿ ಅಡಗಿರುವ ಶಂಕೆಯಲ್ಲಿ ಸರ್ಚ್ ವಾರಂಟ್’ನೊಂದಿಗೆ ಐವರು ಡಿಸಿಪಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಶ್ರೀಧರ್ ಆಪ್ತ ಬಚ್ಚನ್ ಅಲಿಯಾಸ್ ಸಯ್ಯದ್ ಅಮಾನುಲ್ಲನನ್ನು ಪೊಲೀಸರು ಬಂಧಿಸಿದ್ದರು.

Comments are closed.