ಮನೋರಂಜನೆ

ಸಂಭಾವನೆಯಲ್ಲಿ ವಿವಾದದಲ್ಲಿ ನಟಿ ಐಂದ್ರಿತಾ ರೇ!

Pinterest LinkedIn Tumblr


ಸ್ಯಾಂಡಲ್ ವುಡ್ ನ ಬೇಬಿ ಡಾಲ್ ಐಂದ್ರಿತಾ ರೇ ಸಂಭಾವನೆ ವಿಚಾರದಲ್ಲಿಯೇ ವಿವಾದದವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.
ನಟ ಜಗ್ಗೇಶ್ ಹಾಗೂ ನಟಿ ಐಂದ್ರಿತಾ ರೇ ಅಭಿನಯದ ಮೇಲುಕೋಟೆ ಮಂಜ ಚಿತ್ರದ, ಪ್ರಚಾರಕ್ಕೆ ಬರಲು 5 ಲಕ್ಷ ರೂಪಾಯಿ ಕೊಡುವಂತೆ ನಿರ್ಮಾಪಕರ ಬಳಿ ನಟಿ ಐಂದ್ರಿತಾ ರೇ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಇದು ಶುದ್ಧ ಸುಳ್ಳು ಅಂತ ನಟಿ ಐಂದ್ರಿತಾ ರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಸಂಭಾವನೆಯಲ್ಲಿ ನನಗೆ ಬರಬೇಕಾದ 5 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ. ಅದನ್ನು ಬಿಟ್ಟು ಎಕ್ಸ್ ಟ್ರಾ ಕೇಳಿಲ್ಲ” ಅಂತ ನಟಿ ಐಂದ್ರಿತಾ ರೇ ಟ್ವೀಟ್ ಮಾಡಿದ್ದಾರೆ. ಆದರೆ ನಟ, ನಿರ್ದೇಶಕ ಜಗ್ಗೇಶ್ ಜೊತೆ ನಟಿ ಐಂದ್ರಿತಾ ರೇ ನಡೆಸಿರುವ ವಾಟ್ಸ್ ಆಪ್ ಸಂಭಾಷಣೆ ಕೂಡ ಈಗ ಜಗಜ್ಜಾಹೀರಾಗಿದೆ. 5 ಲಕ್ಷ ಕೊಡುವವರೆಗೂ ಚಿತ್ರ ಬಿಡುಗಡೆಗೆ ಬಿಡುವುದಿಲ್ಲ. 5 ಲಕ್ಷ ಸ್ಮಾಲ್ ಅಮೌಂಟ್ ಅಲ್ಲ. ಅದನ್ನ ಕೊಡುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಅಂತ ಎಂದೇ ಜಗ್ಗೇಶ್ ರವರ ಬಳಿ ಐಂದ್ರಿತಾ ರೇ ಹೇಳಿದ್ದಾರೆ. ಆದರೆ ಚಿತ್ರತಂಡ ಮಾತ್ರ ಐಂದ್ರಿತಾ ರೇಗೆ ಕ್ಯಾರೇ ಅನ್ನುತ್ತಿಲ್ಲ.

Comments are closed.