ಮನೋರಂಜನೆ

ಹನ್ಸಿಕಾ ಮೊಟ್ವಾನಿಯು ಮೋಹನ್ ಲಾಲ್ ಮುಂದಿನ ಚಿತ್ರಕ್ಕೆ ನಾಯಕಿ

Pinterest LinkedIn Tumblr


ಕೊಚ್ಚಿ: ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಅವರ ಮುಂದಿನ ಚಿತ್ರಕ್ಕೆ ಹನ್ಸಿಕಾ ಮೋಟ್ವಾನಿ ನಾಯಕಿಯಾಗಲಿದ್ದಾರೆ.
ಚಿತ್ರದ ನಿರ್ದೇಶಕ ಬಿ ಉನ್ನಿಕೃಷ್ಣನ್ ತಮ್ಮ ಫೇಸ್ ಬುಕ್ ನಲ್ಲಿ ಅಧಿಕೃತವಾಗಿ ಈ ವಿಚಾರ ಹಂಚಿಕೊಂಡಿದ್ದಾರೆ. ಬೋಗಾನ್ ಚಿತ್ರದಲ್ಲಿ ನಟಿಸುತ್ತಿರುವ ಹನ್ಸಿಕಾ ಗೆ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ರಾಕ ಲೈನ್ ವೆಂಕಟೇಶ್ ಚಿತ್ರ ನಿರ್ಮಿಸುತ್ತಿದ್ದಾರೆ. ಇದೊಂದು ಬಿಗ್ ಬಜೆಟ್ ಚಿತ್ರವಾಗಿದ್ದು, ಮೋಹನ್ ಲಾಲ್ ಇರುವ ದೃಶ್ಯಗಳಿಗೆ ಸ್ಪೆಷಲ್ ಎಫೆಕ್ಟ್ ನಿಂದ ಕೂಡಿರುತ್ತದೆ ಎಂದು ಉನ್ನಿಕೃಷ್ಣನ್ ಹೇಳಿದ್ದಾರೆ.
ಹಿಂದಿಯ ಭಜರಂಗಿ ಬಾಯಿಜಾನ್ ತಮಿಳಿನ ಲಿಂಗ ಚಿತ್ರಗಳನ್ನು ನಿರ್ಮಿಸಿರುವ ರಾಕ್ ಲೈನ್ ವೆಂಕಟೇಶ್ ಈ ಪ್ರಾಜೆಕ್ಟ್ ಕೂಡ ಅತ್ಯದ್ಭುತವಾಗಿ ನಿರ್ಮಿಸಲಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.

Comments are closed.