ಕರ್ನಾಟಕ

ದೇಶದ ಕಂಪನಿಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಿ: ನಾರಾಯಣ ಮೂರ್ತಿ

Pinterest LinkedIn Tumblr


ಬೆಂಗಳೂರು: ಭಾರತದ ಐಟಿ ಕಂಪನಿಗಳಲ್ಲಿ ಸ್ಥಳೀಯರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.

ಭಾರತದ ಐಟಿ ಕಂಪನಿಗಳು ಎಚ್-1 ಬಿ ವೀಸಾ ಬಳಕೆಯನ್ನು ನಿಲ್ಲಿಸಿ ಸ್ಥಳೀಯರಿಗೆ ಅವಕಾಶಗಳನ್ನು ನೀಡಬೇಕೆಂದು ಅವರು ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಮೆರಿಕದಲ್ಲಿ ಅಮೆರಿಕನ್ನರಿಗೆ ಕೆನಡಾದಲ್ಲಿ ಕೆನಡಾದ ಪ್ರಜೆಗಳಿಗೆ, ಬ್ರಿಟನ್‍ನಲ್ಲಿ ಬ್ರಿಟಿಷರಿಗೆ ಅವಕಾಶ ನೀಡಲಾಗುತ್ತದೆ ಹಾಗೆಯೇ ನಾವು ಎಚ್ 1 ಬಿ ವೀಸಾ ನೀಡಿ ಭಾರತೀಯರನ್ನು ಹೊರ ದೇಶಕ್ಕೆ ಕಳಿಸುವ ಬದಲು ನಮ್ಮ ದೇಶದಲ್ಲಿ ನಮ್ಮವರಿಗೆ ಅವಕಾಶ ನೀಡಬೇಕು.

ಭಾರತೀಯ ಕಂಪನಿಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಿ ಅಲ್ಲಿನ ಮೌಲ್ಯ ವರ್ಧನೆ ಮಾಡಲು ಕಾಲೇಜಿನ ಹಂತದಲ್ಲೇ ಉದ್ಯೋಗಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

Comments are closed.