ಮನೋರಂಜನೆ

‘ಬದ್ರಿನಾಥ್‌ ಕಿ ದುಲ್ಹನಿಯ’ ಟ್ರೇಲರ್‌

Pinterest LinkedIn Tumblr


ನವದೆಹಲಿ: ಬಾಲಿವುಡ್‌ನ ರೊಮ್ಯಾಂಟಿಕ್‌ ಕಾಮಿಡಿ ಚಿತ್ರಗಳು ಸದಾ ಪ್ರೇಕ್ಷಕರ ಮನಗೆಲ್ಲುತ್ತ ಬಂದಿವೆ. ಆ ಸಾಲಿಗೆ ಹೊಸ ಸೇರ್ಪಡೆ ‘ಬದ್ರಿನಾಥ್‌ ಕಿ ದುಲ್ಹನಿಯ’.

2014 ರಲ್ಲಿ ತೆರೆ ಕಂಡಿದ್ದ ಹಂಪ್ಟಿ ಶರ್ಮಾ ಕಿ ದುಲ್ಹನಿಯ ಎಂಬ ಹಿಟ್‌ ಚಿತ್ರ ನೀಡಿದ್ದ ಚಿತ್ರತಂಡವೇ ಈ ಚಿತ್ರ ನಿರ್ಮಿಸಿರುವುದು ಮತ್ತೊಂದು ನಿರೀಕ್ಷೆ ಹುಟ್ಟುಹಾಕಿದೆ. ಹಂಪ್ಟಿ ಚಿತ್ರದ ಉತ್ತಮ ಅಭಿನಯಕ್ಕಾಗಿ ನಾಯಕ ನಟ ವರುಣ್ ಧವನ್‌ ಮತ್ತು ನಾಯಕಿ ಆಲಿಯಾ ಭಟ್‌ಗೆ ಸ್ಟಾರ್‌ ಡಸ್ಟ್‌ ಉತ್ತಮ ನಟ ಹಾಗೂ ನಟಿ ಪ್ರಶಸ್ತಿ ಲಭಿಸಿತ್ತು.

ಯಶಸ್ವಿ ಹಂಪ್ಟಿ ಶರ್ಮಾ ಕಿ ದುಲ್ಹನಿಯ ಚಿತ್ರದ ಕಥೆ ರಚಿಸಿ ನಿರ್ದೇಶಿಸಿದ್ದ ಶಶಾಂಕ್‌ ಖೈತಾನ್‌ ಅವರೇ ಬದ್ರಿನಾಥ್‌ ಚಿತ್ರದ ಜವಾಬ್ದಾರಿ ಹೊತ್ತಿದ್ದಾರೆ. ಧರ್ಮ ಪ್ರೊಡಕ್ಷನ್ಸ್‌ನ ಕರಣ್‌ ಜೊಹರ್‌ ಚಿತ್ರದ ನಿರ್ಮಾಪಕರಾಗಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಚಿತ್ರವು ತೆರೆ ಕಾಣಲಿದೆ.

Comments are closed.