ಮನೋರಂಜನೆ

ಚಿತ್ರೀಕರಣ ಸ್ಥಗಿತಗೊಳಿಸಿ ಮುಂಬೈಗೆ ಮರಳಿದ ‘ಪದ್ಮಾವತಿ’ ಚಿತ್ರತಂಡ

Pinterest LinkedIn Tumblr


ಜೈಪುರ: ವಿವಾದಿತ ‘ಪದ್ಮಾವತಿ’ ಸಿನಿಮಾದ ಚಿತ್ರೀಕರಣವನ್ನು ಮೊಟಕುಗೊಳಿಸಿರುವ ಚಿತ್ರತಂಡ ಶನಿವಾರ ಜೈಪುರದಿಂದ ಮುಂಬೈಗೆ ಮರಳಿದೆ ಎಂದು ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.

‘ಪದ್ಮಾವತಿ’ ಚಿತ್ರದಲ್ಲಿ ರಜಪೂತರ ಇತಿಹಾಸವನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿ ರಜಪೂತ ಕಾರ್ನಿ ಸೇನಾ ಸಂಘಟನೆಯ ಕೆಲ ಸದಸ್ಯರು ಶುಕ್ರವಾರ ಚಿತ್ರೀಕರಣ ನಡೆಯುತ್ತಿದ್ದ ಜಯಗಢ ಕೋಟೆಗೆ ನುಗ್ಗಿ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಹಾಗೂ ಚಿತ್ರತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರು.

ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ರಜಪೂತರ ಚರಿತ್ರೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂಬುದು ರಜಪೂತ ಕಾರ್ನಿ ಸೇನಾ ಸಂಘಟನೆಯ ಆರೋಪವಾಗಿದೆ.

‘ಬನ್ಸಾಲಿ ರಜಪೂತರ ಚರಿತ್ರೆಯನ್ನು ತಪ್ಪಾಗಿ ಚಿತ್ರಿಸುತ್ತಿದ್ದಾರೆ. ಇತಿಹಾಸ ನಿರ್ಮಿಸಲು ನಮ್ಮ ಪೂರ್ವಜರು ಬಲಿದಾನ ಮಾಡಿದ್ದಾರೆ. ಆ ಚರಿತ್ರೆಯನ್ನು ತಪ್ಪಾಗಿ ಚಿತ್ರಿಸುವುದು ಸರಿಯಲ್ಲ. ಬನ್ಸಾಲಿ ಜೋಧಾ ಅಕ್ತರ್‌ ಚಿತ್ರ ನಿರ್ದೇಶಿಸುತ್ತಿದ್ದ ಸಂದರ್ಭದಲ್ಲೂ ನಾವು ಆ ಚಿತ್ರವನ್ನು ವಿರೋಧಿಸಿದ್ದೆವು. ಪದ್ಮಾವತಿ ಚಿತ್ರಕ್ಕೂ ನಮ್ಮ ವಿರೋಧವಿದೆ’ ಎಂದು ರಜಪೂತ ಕಾರ್ನಿ ಸೇನಾ ಸಂಘಟನೆಯ ಸಂಸ್ಥಾಪಕ ಲೋಕೇಂದ್ರ ಸಿಂಗ್‌ ಕಾಲ್ವಿ ಹೇಳಿದ್ದಾರೆ.

Comments are closed.