ಮನೋರಂಜನೆ

‘ಬಾಹುಬಲಿ 2’ ಪೋಸ್ಟರ್‌ ಬಿಡುಗಡೆ; ಏಪ್ರಿಲ್‌ 28ರಂದು ತೆರೆಕಾಣುವ ನಿರೀಕ್ಷೆ

Pinterest LinkedIn Tumblr

ನಿರ್ದೇಶಕ ಎಸ್‌ಎಸ್‌.ರಾಜಮೌಳಿ ‘ಬಾಹುಬಲಿ 2’ ಸಿನಿಮಾದ ಪೋಸ್ಟರ್‌ ಪ್ರಕಟಿಸಿದ್ದಾರೆ. ಪೋಸ್ಟರ್‌ನಲ್ಲಿ ಅಮರೇಂದ್ರ ಬಾಹುಬಲಿ ಮತ್ತು ದೇವಸೇನಾ ಜತೆಯಾಗಿ ಬಿಲ್ಲುವಿದ್ಯೆ ಅಭ್ಯಾಸ ನಡೆಸುತ್ತಿರುವ ಚಿತ್ರವಿದೆ.

ಅಮರೇಂದ್ರನಾಗಿ ಪ್ರಭಾಸ್‌ ಹಾಗೂ ದೇವಸೇನಾ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದು, ಬಾಹುಬಲಿ 1ರ ಮುಂದುವರಿದ ಭಾಗವಾಗಿ ಚಿತ್ರ ನಿರ್ಮಿಸಲಾಗಿದೆ.

ಈಗಾಗಲೇ ಬಾಹುಬಲಿ–2 ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಏಪ್ರಿಲ್‌ 28ರಂದು ತೆರೆಕಾಣುವ ನಿರೀಕ್ಷೆಯಿದೆ.

ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಚಿತ್ರದ ಪೋಸ್ಟರ್‌ ಸಿದ್ಧಪಡಿಸಿ ಟ್ವಿಟರ್‌ನಲ್ಲಿ ನಿರ್ದೇಶಕ ರಾಜಮೌಳಿ ಪ್ರಕಟಿಸಿದ್ದಾರೆ.

Comments are closed.