ಮನೋರಂಜನೆ

ಶಾರುಕ್‌, ಸಲ್ಮಾನ್‌ ಆಪ್ತ ಸ್ನೇಹಿತರು: ಸನ್ನಿ ಲಿಯೋನ್‌

Pinterest LinkedIn Tumblr


ಮುಂಬೈ: ಬಾಲಿವುಡ್‌ ನಟ ಶಾರುಕ್‌ ಖಾನ್‌ ಮತ್ತು ಸಲ್ಮಾನ್‌ ಖಾನ್ ನಡುವಿನ ಬಹಳ ವರ್ಷಗಳ ಗೆಳೆತನ ವ್ಯಕ್ತವಾಗುತ್ತದೆ. ಅವರಿಬ್ಬರ ನಡುವೆ ಉತ್ತಮ ಗೆಳೆತನವಿರುವಂತೆ ತೋರುತ್ತದೆ ಎಂದು ನಟಿ ಸನ್ನಿ ಲಿಯೋನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2011ರ ಬಿಗ್‌ಬಾಸ್‌ನ ರಿಯಾಲಿಟಿ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸನ್ನಿ, ಇದೀಗ ಮತ್ತೊಮ್ಮೆ ಬಿಗ್‌ಬಾಸ್‌ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸಲ್ಮಾನ್‌ ಖಾನ್‌ ನಿರೂಪಿಸುತ್ತಿರುವ ಹಿಂದಿಯ ‘ಬಿಗ್‌ಬಾಸ್‌–10’ ವೇದಿಕೆ ಮೇಲೆ ನಟರಾದ ಶಾರುಕ್‌ ಖಾನ್‌ ಮತ್ತು ಸಲ್ಮಾನ್‌ ಖಾನ್ ಅವರೊಂದಿಗೆ ನಟಿ ಸನ್ನಿ ಲಿಯೋನ್‌ ಹೆಜ್ಜೆ ಹಾಕಿದ್ದಾರೆ.

‘ರಯೀಸ್‌’ ಚಿತ್ರದ ಪ್ರಚಾರಕ್ಕಾಗಿ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಶಾರುಕ್‌ ಖಾನ್‌ ಭಾಗವಹಿಸಲಿದ್ದು, ಅವರೊಂದಿಗೆ ಸನ್ನಿ ಲಿಯೋನ್‌ ವೇದಿಕೆ ಹಂಚಿಕೊಂಡಿದ್ದಾರೆ.

ಶಾರುಕ್‌, ಸಲ್ಮಾನ್‌ ಇಬ್ಬರು ಹಲವು ವರ್ಷಗಳಿಂದ ಒಳ್ಳೆಯ ಸ್ನೇಹಿತರಾಗಿದ್ದು, ಅವರ ಮೇಲೆ ಅಪಾರವಾದ ನಂಬಿಕೆ ಹೊಂದಿರುವುದಾಗಿ ತಿಳಿಸಿದ್ದಾರೆ.

‘ಇಬ್ಬರು ಖಾನ್‌ರೊಂದಿಗೆ ವೇದಿಕೆ ಹಂಚಿಕೊಳ್ಳುವ ಕ್ಷಣ ತುಂಬ ಸಂತೋಷದಾಯಕವಾದದ್ದು’ ಎಂದು ಸನ್ನಿ ಹೇಳಿದ್ದಾರೆ.

Comments are closed.