ಮನೋರಂಜನೆ

ಹಾಲಿವುಡ್ ನಟ ಮೆಲ್ ಗಿಬ್ಸನ್ ಗೆ ಒಂಭತ್ತನೇ ಮಗು

Pinterest LinkedIn Tumblr


ಲಾಸೆಂಜಲಿಸ್: ಹಾಲಿವುಡ್ ನ ಖ್ಯಾತ ನಟ ಮೆಲ್ ಗಿಬ್ಸನ್ (೬೦) ತಮ್ಮ ಒಂಬತ್ತನೇ ಮಗುವನ್ನು ಸ್ವಾಗತಿಸಿದ್ದಾರೆ.
ಎರಡು ವರ್ಷದಿಂದ ಒಟ್ಟಿಗಿರುವ ಮೆಲ್ ಗಿಬ್ಸನ್ ಗೆಳತಿ ರೋಸಲಿಂಡ್ ರಾಸ್ (೨೬) ಅವರಿಗೆ ಗಂಡು ಮಗು ಜನಿಸಿದೆ ಎಂದು ಪೀಪಲ್.ಕಾಮ್ ವರದಿ ಮಾಡಿದೆ. ಮಗು ಶನಿವಾರ ಜನಿಸಿದೆ.
ಮಗುವಿಗೆ ಲಾರ್ಸ್ ಗೆರಾರ್ಡ್ ಎಂದು ನಾಮಕರಣ ಮಾಡಲಾಗಿದೆ ಎಂದು ಗಿಬ್ಸನ್ ಪ್ರತಿನಿಧಿ ಹೇಳಿದ್ದಾರೆ.
“ಅವರು ಅತೀವ ಸಂತಸಗೊಂಡಿದ್ದಾರೆ. ಲಾರ್ಸ್ ಮುದ್ದಾಗಿದೆ. ಅವರ ಕುಟುಂಬ ಜೊತೆಗಿದೆ. ಮೆಲ್ ಚಂದ್ರನ ಮೇಲಿದ್ದಾರೆ. ಅವರೆಲ್ಲ ಮನೆಗೆ ಆಗಮಿಸಿದ್ದು, ಎಲ್ಲರು ಆರೋಗ್ಯವಾಗಿದ್ದು ಸಂತಸದಿಂದಿದ್ದಾರೆ” ಎಂದು ಪ್ರತಿನಿಧಿ ಹೇಳಿದ್ದಾರೆ.
ಗಿಬ್ಸನ್ ತಮ್ಮ ಮಾಜಿ ಪತ್ನಿ ರಾಬಿನ್ ಮೂರ್ ಅವರೊಂದಿಗೆ ಏಳು ಮಕ್ಕಳನ್ನು ಹೊಂದಿದ್ದಾರೆ. ಇವರು ೨೬ ವರ್ಷಗಳ ಕಾಲ ದಾಂಪತ್ಯ ನಡೆಸಿದ್ದರು.
‘ಹ್ಯಾಕ್ ಸಾ ರಿಡ್ಜ್’ ನಿರ್ದೇಶಕ ಮೆಲ್, ರಷ್ಯಾದ ಪಿಯಾನೋವಾದಕಿ ಓಸ್ಕನ ಗ್ರಿಗೋರಿಯೇವ ಅವರೊಂದಿಗೆ ಒಂದು ಹೆಣ್ಣು ಮಗು ಹೊಂದಿದ್ದಾರೆ.

Comments are closed.