ರಾಷ್ಟ್ರೀಯ

ದೇಶದ 50 ನಗರಗಳಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಕುಸಿತ: ಸಮೀಕ್ಷೆ

Pinterest LinkedIn Tumblr


ನವದೆಹಲಿ: ನವಂಬರ್‌ ನೋಟು ರದ್ದತಿ ನಂತರ ದೇಶದ 50 ನಗರಗಳಲ್ಲಿ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಶೇ.30.5 ರಷ್ಟು ಕುಸಿತ ಕಂಡಿದೆ ಎಂದು ಅಂತರರಾಷ್ಟ್ರೀಯ ದತ್ತಾಂಶ ಸಂಸ್ಥೆ (ಐಡಿಸಿ) ತಿಳಿಸಿದೆ.

ಐಡಿಸಿ ವರದಿ ಪ್ರಕಾರ ನವಂಬರ್‌ ಮತ್ತು ಅಕ್ಟೋಬರ್‌ ಮಾಸದಲ್ಲಿ ಟೈರ್‌–1 (ಪ್ರಥಮ ದರ್ಜೆ) ನಗರಗಳಲ್ಲಿ ಶೇ.31.7 ಹಾಗೂ ಟೈರ್‌–2 (ದ್ವಿತೀಯ ದರ್ಜೆ) ಮತ್ತು ಟೈರ್‌–3 (ತೃತೀಯ ದರ್ಜೆ) ನಗರಗಳಲ್ಲಿ ಶೇ.29.5 ರಷ್ಟು ಕುಸಿತ ಕಂಡಿದೆ.

ಪ್ರತಿವರ್ಷ ಅಕ್ಟೋಬರ್‌ ತಿಂಗಳಲ್ಲಿ ಹಬ್ಬದ ಪ್ರಯುಕ್ತ ಹೆಚ್ಚಿನ ವಹಿವಾಟು ದಾಖಲಾಗುವುದು ವಾಡಿಕೆ. ಸ್ಮಾರ್ಟ್‌ಫೋನ್‌ ಉತ್ಪಾದಕರು ಸಹ ಇದರ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಿದ್ದರು. ಆದರೆ ನೋಟು ರದ್ದತಿಯಿಂದ ಈ ಬಾರಿ ಸ್ಮಾರ್ಟ್‌ಫೋನ್‌ ಉದ್ಯಮದಲ್ಲೂ ಏರುಪೇರಾಗಿದೆ.

‘ನೋಟು ರದ್ದತಿಯಿಂದ ಸ್ಮಾರ್ಟ್‌ಫೋನ್‌ ಗ್ರಾಹಕರ ಬೇಡಿಕೆ, ಫೋನುಗಳ ಶೇಖರಣೆ, ಫೋನುಗಳ ಸಾಗಾಟ ಸೇರಿದಂತೆ ಬಹುತೇಕ ಎಲ್ಲ ವಿಧದಲ್ಲೂ ಮಂದಗತಿಯ ಹಾದಿ ಹಿಡಿದ ಪರಿಣಾಮ ಸ್ಮಾರ್ಟ್‌ಫೋನ್‌ಗಳ ಮಾರಾಟ ಹಿನ್ನಡೆ ಕಂಡಿದೆ’ ಎಂದು ಐಡಿಸಿ ಹಿರಿಯ ಮಾರುಕಟ್ಟೆ ವಿಶ್ಲೇಷಕಿ ಉಪಾಸನಾ ಜೋಷಿ ತಿಳಿಸಿದ್ದಾರೆ.

ಫೆಬ್ರುವರಿ ತಿಂಗಳ ನಂತರ ಸ್ಮಾರ್ಟ್‌ಫೋನ್‌ ಮಾರಾಟ ಪ್ರಗತಿಯತ್ತ ಸಾಗುವ ಎಲ್ಲ ನಿರೀಕ್ಷೆಗಳಿವೆ ಎಂದು ಐಡಿಸಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Comments are closed.