ಮನೋರಂಜನೆ

`ಶೂಟಿಂಗ್ ಮುಗಿದರೂ ಪವನ್ ಕಲ್ಯಾಣ್ ನನ್ನನ್ನ ಬಿಟ್ಟಿರಲಿಲ್ಲ’

Pinterest LinkedIn Tumblr


ಒಂದು ಕಾಲದ ತೆಲುಗು ಚಿತ್ರರಂಗದ ಹಾಟ್ ನಟಿ ರಾಸಿ ತಮ್ಮ ವೃತ್ತಿ ಜೀವನದ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಾಮ್ ಚರಣ್ ನಟಿಸುತ್ತಿರುವ ಮುಂದಿನ ಚಿತ್ರದಲ್ಲಿ ರಾಸಿ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿ ವೇಳೆ ತಮ್ಮ ಮತ್ತು ಪವನ್ ಕಲ್ಯಾಣ್ ನಡುವೆ ಗೋಕುಲಂ ಲೋ ಸೀತಾ ಶೂಟಿಂಗ್ ವೇಳೆ ನಡೆದ ಆಸಕ್ತಿಕರ ಸಂಗತಿಯೊಂದನ್ನ ಹೇಳಿಕೊಂಡಿದ್ದಾರೆ.
ಪವನ್ ಯಾವಾಗಲೂ ಕೆಲಸದ ಬಗ್ಗೆ ತುಂಬಾ ಬದ್ಧರಾಗಿರುತ್ತಾರೆ. ಬೇರೆ ಯಾರ ಬಗ್ಗೆಯೂ ಹೆಚ್ಚು ಗಮನಹರಿಸಲ್ಲ. ಗೋಕುಲಂ ಲೋ ಸೀತಾ ಚಿತ್ರದ ಶೂಟಿಂಗ್ ವೇಳೆ ಒಮ್ಮೆ ಶೂಟಿಂಗ್ ಮುಗಿದ ಬಳಿಕವೂ ನೈಟ್ ಸೀನ್ ಅನ್ನ ಮತ್ತೊಮ್ಮೆ ಶೂಟಿಂಗ್ ಮಾಡಿಸಿದರು. ಒಮ್ಮೆ ತೆಗೆದ ಸೀನ್ ಅವರಿಗೆ ಇಷ್ಟವಾಗಿರಲಿಲ್ಲ. ಹೀಗಾಗಿ, ನಾನು ಟಯರ್ಡ್ ಆಗಿದ್ದರೂ ನನ್ನ ಮನವೊಲಿಸಿ ನೈಟ್ ಸೀ ರೀಶೂಟ್ ಮಾಡಿಸಿದರು. ಇದರಿಂದ ಅವರಿಗೆ ಕೆಲಸದ ಬಗ್ಗೆ ಇರುವ ಬದ್ಧತೆ ಗೊತ್ತಾಯಿತು. ಆ ಸಿನಿಮಾ ನನ್ನ ಜೀವನದ ಅತ್ಯಂತ ಸ್ಪೆಷಲ್ ಮೂವಿ ಎಂದು ಹೇಳಿಕೊಂಡಿದ್ದಾರೆ.

Comments are closed.