ರಾಷ್ಟ್ರೀಯ

250 ಸಿಸಿ ಸಾಮರ್ಥ್ಯದ 1.19 ಲಕ್ಷ ರೂ.ನ ಯಮಹಾ ಎಫ್ ಜೆಡ್ 25 ಬೈಕ್ ಮಾರುಕಟ್ಟೆಗೆ ಬಿಡುಗಡೆ

Pinterest LinkedIn Tumblr


ನವದೆಹಲಿ: ಯಮಹಾ ಸಂಸ್ಥೆ ತನ್ನ ಯಶಸ್ವೀ ಬೈಕ್ ಸರಣಿ ಎಫ್ ಜೆಡ್ ನ ಮುಂದುವರೆದ ಭಾಗವಾದ ಎಫ್ ಜೆಡ್ 25 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಬಹು ನಿರೀಕ್ಷಿತ ಬೈಕ್ ನ ಬೆಲೆ 1.19 ಲಕ್ಷ ರು, ಎಂದು ತಿಳಿದುಬಂದಿದೆ.
ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಈಗಾಗಲೇ ಯಮಹಾ ಸಂಸ್ಥೆಯ ಎಫ್ ಜೆಡ್ ಸರಣಿಯ ಬೈಕುಗಳು ತಮ್ಮದೇ ಆಧ ಛಾಪು ಮೂಡಿಸಿದ್ದು, ಯಮಹಾ ದ್ವಿಚಕ್ರ ವಾಹನಗಳಲ್ಲಿಯೇ ಎಫ್ ಜೆಡ್ ಸರಣಿಯ ಬೈಕುಗಳು ಅತ್ಯಂತ ಯಶಸ್ವಿಯಾಗಿ ಮಾರಾಟವಾಗುತ್ತಿರುವ ಬೈಕುಗಳಾಗಿವೆ. ಹೀಗಾಗಿ ಪ್ರಸ್ತುತ ಬಿಡುಗಡೆಯಾಗಿರುವ ಎಫ್ ಜೆಡ್ 25 ಸರಣಿಯ ಬೈಕುಗಳ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿತ್ತು. ಈ ನಿರೀಕ್ಷೆಗಳ ಬೆನ್ನಲ್ಲೇ ಎಫ್ ಜೆಡ್ 25 ಸರಣಿಯ ಬೈಕುಗಳು ಮಾರುಕಟ್ಟೆ ಪ್ರವೇಶಿಸಿದ್ದು, ಇದರ ಎಕ್ಸ್ ಷೋರೂಂ ಬೆಲೆ 1.19 ಲಕ್ಷ ರುಗಳೆಂದು ಯಮಹಾ ಸಂಸ್ಥೆ ತಿಳಿಸಿದೆ.
ತಾಂತ್ರಿಕವಾಗಿಯೂ ಯಮಹಾ ಎಫ್ ಜೆಡ್ 25 ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, 250 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. ಅಂತೆಯೇ ಐದು ಗೇರ್ ಗಳು ಮತ್ತು ಒಂದು ಸಿಲಿಂಡರ್ ಅನ್ನು ಬೈಕ್ ಅಳವಡಿಸಲಾಗಿದ್ದು, 14 ಲೀಟರ್ ಇಂಧನ ಸಾಮರ್ಥ್ಯದ ಟ್ಯಾಂಕ್ ಅನ್ನು ಬೈಕಿಗೆ ಅಳವಡಿಸಲಾಗಿದೆ. ಯಮಹಾ ಎಫ್ ಜೆಡ್ 25 ಬೈಕ್ ಒಟ್ಟು 148 ಕೆಜಿ ತೂಕ ಹೊಂದಿದ್ದು, 43 ಕಿ.ಮೀ/ಲೀ. ಮೈಲೇಜ್ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.
ಬೈಕ್ ನ ಸ್ಪೀಡೋಮೀಟರ್, ಟ್ಯಾಖೋ ಮೀಟರ್, ಟ್ರಿಪ್ ಮೀಟರ್, ಓಡೋ ಮೀಟರ್, ಗಡಿಯಾರ ಹಾಗೂ ಫ್ಯೂಲ್ ಗೇಜ್ ಎಲ್ಲವೂ ಡಿಜಿಟಲ್ ಡಿಸ್ಪ್ಲೇ ಹೊಂದಿರಲಿದೆ. ಇದಲ್ಲದೇ ಇ-ಸ್ಟಾರ್ಟ್, ಇಂಜಿನ್ ಆಫ್ ಬಟನ್ ಗಳು ಕೂಡ ಇರಲಿವೆ ಎಂದು ಸಂಸ್ಥೆ ಹೇಳಿದೆ. ಹೆಡ್ ಲೈಟ್ ಮತ್ತು ಟೈಲ್ ಲೈಟ್ ಎರಡೂ ಎಲ್ ಇಡಿ ಬಲ್ಬ್ ಗಳಿಂದ ಕೂಡಿದ್ದು, 12 ವೋಲ್ಟ್ಸ್ ಸಾಮರ್ಥ್ಯದ ಬಲ/ಎಡ ತಿರುವಿನ ಲೈಟ್ ಗಳನ್ನು ಹೊಂದಿದೆ. ಬೈಕ್ ನ ಹಿಂಬದಿ ಚಕ್ರಕ್ಕೆ 282 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿ ಚಕ್ರಕ್ಕೆ 220 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

Comments are closed.