ಮನೋರಂಜನೆ

ಹಾಟ್ ಮತ್ತು ಬೋಲ್ಡ್ ಅವತಾರದಲ್ಲಿ ಎಮಿ ಜಾಕ್ಸನ್

Pinterest LinkedIn Tumblr


ಬ್ರಿಟೀಶ್ ಮೂಲದ ತಾರೆ ಎಮಿ ಜಾಕ್ಸನ್. ಭಾಷೆ ಬರದಿದ್ದರೂ ಭಾರತೀಯ ಸಿನಿಮಾಗಳಲ್ಲಿ ಮಿಂಚುತ್ತಿರುವ ಬೆಡಗಿ. ಈ ಚೆಲುವೆಗೆ ಅದ್ಭುತವಾದ ದೇಹವನ್ನು ದೇವರು ಕರುಣಿಸಿದ್ದಾನೆ. ಈಗ ಅದನ್ನೇ ಬಂಡವಾಳ ಮಾಡಿಕೊಂಡು ಬೆಳ್ಳಿಪರದೆ ಮೇಲೆ ಮಿಂಚುತ್ತಿದ್ದಾರೆ.

ಇತ್ತೀಚೆಗೆ ಬಿಕಿನಿಯಲ್ಲಿರುವ ಹಾಟ್ ಫೋಟೋ ಒಂದನ್ನು ರಿಲೀಸ್ ಮಾಡಿದ್ದಾರೆ ಎಮಿ ಜಾಕ್ಸನ್. ಅವರ ಬ್ಯೂಟಿಗೆ ಪಡ್ಡೆಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ರೀತಿಯ ಫೋಟೋಗಳಿಗೆ ಖ್ಯಾತರಾಗಿರುವ ತಾರೆಗಳಲ್ಲಿ ಎಮಿ ಜಾಕ್ಸನ್ ಸಹ ಇತ್ತೀಚೆಗೆ ಗಮನಸೆಳೆಯುತ್ತಿದ್ದಾರೆ.

ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಭಾರಿ ಬಜೆಟ್ ಚಿತ್ರ 2.0 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಮಿ ಜಾಕ್ಸನ್. ಈ ಚಿತ್ರದ ನಾಯಕನ ಸೂಪರ್ ಸ್ಟಾರ್ ರಜನಿಕಾಂತ್ ಎಂಬುದು ಮುಖ್ಯ. ಎಮಿ ಜಾಕ್ಸನ್ ಈ ಹಿಂದೆ ಶಂಕರ್ ನಿರ್ದೇಶನದ ’ಐ’ ಸಿನಿಮಾದಲ್ಲೂ ಅಭಿನಯಿಸಿದ್ದರು.

Comments are closed.