ಮನೋರಂಜನೆ

ಚಿತ್ರೀಕರಣದ ವೇಳೆ ಗುಂಡು ತಾಗಿ ನಟ ಸಾವು

Pinterest LinkedIn Tumblr


ಸಿಡ್ನಿ: ಹಾಡಿನ ವಿಡಿಯೋ ಚಿತ್ರೀಕರಣದ ಸಂದರ್ಭದಲ್ಲಿ ಹಾರಿಸಲಾಗಿರುವ ಗುಂಡು ನಟನ ಎದೆಗೆ ತಾಗಿ ಸಾವಿಗೀಡಾದ ಘಟನೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದಿದೆ.

ಬಂದೂಕಿನಿಂದ ಗುಂಡು ಸಿಡಿಸುವ ದೃಶ್ಯಗಳನ್ನು ನಗರದ ಬಾರ್‌ ಒಂದರಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಗುಂಡು ನಟನ ಎದೆಗೆ ತಗುಲಿದೆ.

ಮ್ಯೂಸಿಕ್‌ ವಿಡಿಯೋ ನಿರ್ದಿಷ್ಟ ದೃಶ್ಯದ ಚಿತ್ರೀಕರಣಕ್ಕಾಗಿ ನಟರು ಬಂದೂಕುಗಳನ್ನು ಬಳಸಿದ್ದಾರೆ. ಆಕಸ್ಮಿಕವಾಗಿ ಗುಂಡು ಸಿಡಿದಿದೆ ಎನ್ನಲಾಗಿದ್ದರೂ ಪೊಲೀಸರು ಅಪರಾಧದ ತನಿಖೆ ಚುರುಕುಗೊಳಿಸಿದ್ದಾರೆ.

ಸಾವಿಗೀಡಾಗಿರುವ ನಟನ ಹೆಸರು ಮತ್ತು ಬ್ಯಾಂಡ್‌ ಕುರಿತ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.

Comments are closed.