ರಾಷ್ಟ್ರೀಯ

ಛತ್ತೀಸ್ ಗಡ: ರಕ್ಷಣಾ ಪಡೆಯೊಂದಿಗೆ ಗುಂಡಿನ ಚಕಮಕಿ: ಇಬ್ಬರು ನಕ್ಸಲರ ಸಾವು

Pinterest LinkedIn Tumblr


ರಾಯಪುರ: ರಕ್ಷಣಾ ಪಡೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಮೃತಪಟ್ಟಿರುವ ಘಟನೆ ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಪದಮೆಟ್ಟಾ ಗ್ರಾಮದ ಬೆದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಾಡಿನಲ್ಲಿ ಕಳೆದ ಸಂಜೆ ನಕ್ಸಲರು ಗುಂಡಿನ ಕಾಳಗ ಆರಂಭಿಸಿದ್ದಾರೆ. ನಂತರ ರಕ್ಷಣಾ ಪಡೆಯು ಪ್ರತಿದಾಳಿ ನಡೆಸಿದೆ ಎಂದು ಕಲ್ಲುರಿ ಪೊಲೀಸರು ತಿಳಿಸಿದ್ದಾರೆ.
ಪದಮೆಟ್ಟಾ ಕಾಡಿನಲ್ಲಿದ್ದ ಶಸ್ತ್ರ ಸಜ್ಜಿತ ನಕ್ಸಲರ ಗುಂಪು ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ರಕ್ಷಣಾ ಪಡೆ ಕೂಡ ಪ್ರತಿದಾಳಿ ನಡೆಸಿದೆ, ಕೂಡಲೇ ನಕ್ಸಲರು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ವೇಳೆ ರಕ್ಷಣಾ ಪಡೆ ಪರಿಶೀಲನೆ ನಡೆಸಿದಾಗ ಇಬ್ಬರು ಪುರುಷರ ಮೃತ ದೇಹಗಳು ಪತ್ತೆಯಾಗಿವೆ. ಅವರ ಬಳಿ 303 ಸರ್ವೀಸ್ ಗನ್ ಹಾಗೂ 315 ರೈಫಲ್ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.