ಮನೋರಂಜನೆ

ಏನ್ ನಿನ್ ಪ್ರಾಬ್ಲಮ್ಮು ಬಿಡುಗಡೆ

Pinterest LinkedIn Tumblr


ತಿಥಿ ಕಲಾವಿದರು ನಟಿಸಿರುವ ’ಏನ್ ನಿನ್ ಪ್ರಾಬ್ಲಮ್ಮು ತಿಥಿ ಮಾಡಬೇಕಾ ಅಂದು ಅಡಿಬರಹದಲ್ಲಿರುವ ಚಿತ್ರವು ಈ ವಾರ ಬಿಡುಗಡೆಯಾಗಿದೆ.

ಚಿತ್ರದಲ್ಲಿ ಮೂರು ತಲೆಮಾರಿನ ಕತೆಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಹಳ್ಳಿಯಲ್ಲಿ ಹಿರಿಯ ತಲೆಮಾರು ಕುಟುಂಬವೊಂದು ಹೇಗೆ ಜೀವನ ನಡೆಸುತ್ತದೆ ಎಂಬುದು ಸಿನಿಮಾದ ತಿರುಳು ಎನ್ನುತ್ತಾರೆ ನಿರ್ದೇಶಕ ಗಾಲಿಲಕ್ಕಿ.

ಚಿತ್ರದಲ್ಲಿ ಮುಖ್ಯಸ್ಥ ನಾಗಿರುವ ಸೆಂಚುರಿಗೌಡ ಮೊದಲನಿಂದಲೂ ನ್ಯಾಯ ನೀತಿ, ಧರ್ಮದಂತೆ ಬದುಕಲು ಇಷ್ಟಪಡುತ್ತಾನೆ. ತನ್ನದೆ ಸಿದ್ದಾಂತ, ರೈತರ ಬವಣೆಗಳಿಗೆ ಸ್ಪಂದನೆ ನೀಡುವುದು, ಮರ ಕಡಿಯಬಾರದು ಇಂತಹುಗಳಿಗೆ ಅಂಟಿಕೊಂಡಿರುತ್ತಾನೆ. ಮಗ ಗಡ್ಡಪ್ಪ ಅಪ್ಪನಂತೆ ಶೇಕಡ ೫೦ರಷ್ಟು ಗುಣವನ್ನು ಹೊಂದಿರುತ್ತಾನೆ. ಮೊಮ್ಮಗ ಅಭಿಷೇಕ್ ಇವರಿಬ್ಬರ ನಡೆತೆಗೆ ವೈರುದ್ಯ ದಿಕ್ಕಿನಲ್ಲಿ ಇರಲು ಇಚ್ಚೆಪಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ಲೈಮಾಕ್ಸ್‌ನಲ್ಲಿ ಮೂರು ಗುಣಗಳು ಸೇರಿಕೊಂಡಾಗ ಏನಾಗುತ್ತವೆ ಎಂಬುದನ್ನು ತೋರಿಸಿ, ಉತ್ತಮ ಸಂದೇಶವನ್ನು ಹೇಳಲಾಗಿದೆ ಎನ್ನುವ ಗಾಲಿಲಕ್ಕಿ ಎಂದಿನಂತೆ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆ ತುರುಕಿರುವುದರಿಂದ ಯುಟ್ಯೂಬ್‌ನಲ್ಲಿ ಒಂದು ಮಿಲಿಯನ್ ಜನರು ವೀಕ್ಷಣೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ.

ನನಗೆ ಡಬಲ್ ಮಿನಿಂಗ್ ನಿರ್ದೇಶಕ ಎನ್ನುವ ಹಣೆಪಟ್ಟಿ ಕಟ್ಟಲಾಗಿದೆ ಇದರಿಂದ ಅನುಕೂಲವೂ ಆಗಿದೆ ತೊಂದರೆಯೂ ಆಗಿದೆ ಉತ್ತಮ ಸಂದೇಶವಿರುವ ಕತೆಗಳು ನನ್ನ ಬಳಿ ಇದ್ದರೂ ಆ ತುಡಿತ ನನ್ನಲ್ಲಿದ್ದರೂ ಯಾರೂ ಅದಕ್ಕೆ ಬೆಂಬಲ ನೀಡುತ್ತಿಲ್ಲ ಡಬಲ್ ಮಿನಿಂಗ್ ಕತೆ ಎಂದರೆ ಆಗಲಿ ಎನ್ನುತ್ಥಾರೆ ಅದಕ್ಕೆ ಇಂತಹ ಚಿತ್ರಗಳಿಗೆ ಜೋತು ಬಿದ್ದಿದ್ದೇನೆ ಎಂದರು ಲಕ್ಕಿ.

ನಾಯಕಿಯಾಗಿ ರಂಗಭೂಮಿ ಕಲಾವಿದೆ ನಂದಿನಿ ಹಳ್ಳಿ ಹುಡುಗಿಯಾಗಿ ನಟಿಸಿದ್ದಾರೆ. ವೀರಸಮರ್ಥ್ ಸಂಗೀತದಲ್ಲಿ ಒಂದು ಹಾಡಿಗೆ ಗಡ್ಡಪ್ಪ ನಟನೆ ಮಾಡಿರುವುದು ವಿಶೇಷವಾಗಿದೆ. ವಿತರಕ ಜಾಕ್‌ಮಂಜು ಹಕ್ಕುಗಳನ್ನು ಖರೀದಿಸಿ ಸುಮಾರು ೨೦೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದಾರೆ..

Comments are closed.