
ಮೂರು ವರ್ಷ ಕೆಳಗೆ ಚಿತ್ರೀಕರಣ ಆರಂಭಿಸಿದ ‘ರಿಕ್ತ’ ಚಿತ್ರವು ಈ ವಾರ ಬಿಡುಗಡೆಗೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿಯೇ ರಿಕ್ತ ತೆರೆಕಾಣಬೇಕಿತ್ತಾದರೂ ನೋಟು ಅಮಾನ್ಯವಾದ ಕಾರಣ ನಿರ್ಮಾಪಕರು ಪ್ರೇಕ್ಷಕರಿಗೆ ತೊಂದರೆಯಾಗಬಾರದೆಂದು ನಿರ್ಧರಿಸಿ ಬಿಡುಗಡೆಯನ್ನು ಮುಂದೂಡಿದ್ದರು.
‘ರಿಕ್ತ’ ಎನ್ನುವುದರ ಅರ್ಥ ಶೂನ್ಯ ಎಂದಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತರಾದ ಸಂಚಾರಿವಿಜಯ್ ನಟಿಸಿರುವ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರ ಇದಾಗಿದೆ. ಸತತ ೨೨ ಘಂಟೆಗಳ ಕಾಲ ದೆವ್ವದ ಕಾಸ್‌ಟ್ಯೂಮ್‌ನಲ್ಲಿ ಅಭಿನಯಿಸಿರುವುದು ಅಲ್ಲದೆ ಒಂದು ಹಾಡಿಗೆ ಕಂಠದಾನ ಮಾಡಿರುವುದು ವಿಶೇಷ.
ಅವರ ಪಾತ್ರಕ್ಕೆ ನಾಲ್ಕು ಶೇಡ್‌ಗಳಿದ್ದು ಒಂದು ಹಂತದಲ್ಲಿಯೂ ಹೆದರಿಸದೆ ಸುಂದರ ದೆವ್ವವಾಗಿ ನಾಯಕಿಯನ್ನು ಪ್ರೀತಿ ಮಾಡುವ ವಿಭಿನ್ನತೆ ಇರುವುದು ಅವರ ನಟನೆಗೆ ಪ್ಲಸ್ ಪಾಯಿಂಟ್ ಆಗಿದೆ. ವಾಣಿಜ್ಯ ಕತೆಗಳ ಚೌಕಟ್ಟನ್ನು ಮೀರಿ ಹೂಸತನದ ಪ್ರಯತ್ನದಲ್ಲಿ ಮಾಡಿರುವ ಸಿನೆಮಾ ಎಂದು ರಿಕ್ತ ತಂಡವು ಬಣ್ಣಿಸಿಕೊಳ್ಳುತ್ತದೆ.
ಚಿತ್ರಬ್ರಹ್ಮ ಪುಟ್ಟಣ್ಣಕಣಗಾಲ್ ಸಂಬಂಧಿ ವಾಗ್ದೇವಿ ಅದ್ವಿತಾಳ ಮೊದಲ ಚಿತ್ರವಾಗಿದ್ದು, ನಾಯಕಿ ಪಾತ್ರದಲ್ಲಿ ನಟಿಸಿದ್ದು ರೋಮಾಂಚನ ಉಂಟುಮಾಡಿದೆ ಎನ್ನುತ್ತಾರೆ.
ಸುಷ್ಮಿತಾ, ಮಾದೇಶ್‌ನೀನಾಸಂ, ಅಭಿಷೇಕ್, ಜಗದೀಶ್ ಇವರೆಲ್ಲರಿಗೂ ರಿಕ್ತ ಹೊಸ ಪ್ರಯತ್ನವಾಗಿದೆ. ಪಾಶ್ಚಿಮಾತ್ಯ ವಾದ್ಯಗಳ ಮೊರೆ ಹೋಗದೆ ಸಿತಾರ್,ಮೃದಂಗ, ತಬಲಗಳನ್ನು ಬಳಸಿಕೊಂಡು ನಾಲ್ಕು ಹಾಡುಗಳಿಗೆ ಕ್ಲಾಸಿಕಲ್ ಟಚ್ ನೀಡಿ ಸಂಗೀತ ಸಂಯೋಜಿಸಿದ್ದಾರೆ ರಾಕಿಸೋನು.
ಇದರ ಪೈಕಿ ಮಿಸ್ಸುಡ ಗೀತೆ ಒಂದು ಲಕ್ಷಕ್ಕೂ ಹೆಚ್ಚು ಯುಟ್ಯೂಬ್‌ನಲ್ಲಿ ವೀಕ್ಷಣೆ ಮಾಡಿದ್ದಾರಂತೆ. ಅಮೃತ್ ಕುಮಾರ್ ಕತೆ ಬರೆದು ನಿರ್ದೇಶನ ಮಾಡಿದ್ದು ಅರುಣ್‌ಕುಮಾರ್ ಹಣ ಹೂಡಿದ್ದಾರೆ. ಜೆಜೆ ಎಂಟರ್‌ಪ್ರೈಸಸ್ ಮುಖಾಂತರ ಸುಮಾರು ೬೦ ಕೇಂದ್ರಗಳಲ್ಲಿ ತೆರೆಕಂಡಿದೆ.
Comments are closed.