ಮನೋರಂಜನೆ

ಒಂದೇ ವಾರದಲ್ಲಿ 100 ಕೋಟಿ ಗಳಿಸಿದ ಚಿರಂಜೀವಿಯ ‘ಖೈದಿ ನಂ 150’

Pinterest LinkedIn Tumblr


ನವದೆಹಲಿ: ತೆಲುಗು ಚಿತ್ರರಂಗದ ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಖೈದಿ ನಂ 150’ ಬಿಡುಗಡೆಯಾದ ವಾರದಲ್ಲೇ ₹ 100 ಕೋಟಿ ಗಳಿಸಿದೆ.

ಮಗ ರಾಮ್‌ ಚರಣ್‌ ಬಂಡವಾಳ ಹೂಡಿದ್ದ ಚಿತ್ರವು ಚಿರಂಜೀವಿ ಅವರ ವೃತ್ತಿ ಬದುಕಿನ ರೀ ಎಂಟ್ರಿಯಾಗಿದೆ. ವಿಶ್ವದಾದ್ಯಂತ ಏಕ ಕಾಲಕ್ಕೆ ಬಿಡುಗಡೆಯಾದ ‘ಖೈದಿ ನಂ 150’ ಚಿತ್ರ ಇದುವರೆಗೆ ₹ 106 ಕೋಟಿ ಗಳಿಸಿದೆ.

ಸಂಕ್ರಾಂತಿ ಹಬ್ಬದ ಎರಡು ದಿನದ ರಜೆ ಅವಧಿಯಲ್ಲಿ ₹ 50 ಕೋಟಿಗೂ ಹೆಚ್ಚು ಬಾಕ್ಸ್‌ ಆಫೀಸ್‌ ಗಳಿಕೆ ಮಾಡಿದೆ. ತಮಿಳಿನ ‘ಕತ್ತಿ’ ಚಿತ್ರದ ರಿಮೇಕ್‌ ಆದ ಖೈದಿಯಲ್ಲಿ ಕಾಜಲ್‌ ಅಗರವಾಲ್‌ ನಾಯಕಿಯಾಗಿ ನಟಿಸಿದ್ದಾರೆ.

Comments are closed.