ರಾಷ್ಟ್ರೀಯ

ತಿಂಗಳಿಗೆ ಎಟಿಎಂನಿಂದ ಹಣ ವಿತ್ ಡ್ರಾಕ್ಕೆ 3 ಬಾರಿ ಮಾತ್ರ ಉಚಿತ ಬಳಕೆ?

Pinterest LinkedIn Tumblr


ನವದೆಹಲಿ: ಯಾವುದೇ ಡೆಬಿಟ್‌ಕಾರ್ಡ್‌ ಬಳಕೆದಾರರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 5 ಬಾರಿ ಉಚಿತ ವ್ಯವಹಾರ ನಡೆಸಬಹುದಾಗಿದ್ದ ಸೌಲಭ್ಯಕ್ಕೆ ಕತ್ತರಿ ಹಾಕಲು ಕೇಂದ್ರ ಸರ್ಕಾರ ಚಿಂತಿಸಿದೆ.

ಎಟಿಎಂಗಳಲ್ಲಿ ಈವರೆಗೆ ಇದ್ದ 5 ಬಾರಿ ಉಚಿತ ವ್ಯವಹಾರವನ್ನು 3 ಬಾರಿಯಾಗಿ ಇಳಿಸಬೇಕು ಎಂದು ಬ್ಯಾಂಕ್‍ಗಳು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪವನ್ನಿರಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ದ ಇಕಾನಾಮಿಕ್ಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

5 ಬಾರಿ ಇರುವ ಉಚಿತ ವಹಿವಾಟನ್ನು ಮೂರು ಬಾರಿಗೆ ಇಳಿಸುವ ಬಗ್ಗೆ ವಿತ್ತ ಸಚಿವಾಲಯದ ಜತೆ ಚರ್ಚೆ ನಡೆಸಿದ್ದು, ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ ಎಂದು ಬ್ಯಾಂಕ್‍ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈಗಿರುವ ನಿಯಮದ ಪ್ರಕಾರ ಡೆಬಿಟ್‌ಕಾರ್ಡ್‌ ಬಳಕೆದಾರರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 5 ಬಾರಿ ಉಚಿತ ವ್ಯವಹಾರ ಹಾಗೂ ಇತರ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ 3 ಬಾರಿ ಉಚಿತ ವ್ಯವಹಾರ ನಡೆಸಬಹುದಾಗಿದೆ. ಆನಂತರ ಪ್ರತಿ ವಹಿವಾಟಿಗೂ ₹20 ಶುಲ್ಕ ವಿಧಿಸಲಾಗುತ್ತದೆ.

Comments are closed.