ರಾಷ್ಟ್ರೀಯ

ತ್ರಿವರ್ಣ ಧ್ವಜವನ್ನು ಆರ್‍ಎಸ್‍ಎಸ್‍ ನಿಂದ ಕಡಗಣನೆ: ರಾಹುಲ್ ಗಾಂಧಿ

Pinterest LinkedIn Tumblr


ಋಷಿಕೇಶ: ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಉತ್ತರಾಖಂಡ್‍‍ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆರ್‍ಎಸ್‍ಎಸ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

ಆರ್‍ಎಸ್‍ಎಸ್‍ನವರು ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 52 ವರ್ಷಗಳ ನಂತರ ಅವರು ನಾಗ್ಪುರ್‍ನಲ್ಲಿರುವ ಆರ್‍ಎಸ್‍ಎಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಆರೋಹಣ ಮಾಡಿದ್ದರು.

ಕಳೆದ ಏಳೆಂಟು ತಿಂಗಳಿನಿಂದ ನಾನು ಗಮನಿಸುತ್ತಲೇ ಇದ್ದೇನೆ. ಬಿಜೆಪಿ-ಆರ್‍ಎಸ್‍ಎಸ್ ಜತೆಯಾಗಿ ಏನೆಲ್ಲಾ ನಾಶಮಾಡಲು ಬಯಸುತ್ತಿದೆ? ಎಂಬದರ ಬಗ್ಗೆಯೂ ನಾನು ಗೂಗಲ್ ಮಾಡಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

ಖಾದಿ ಉದ್ಯೋಗ್ ಕ್ಯಾಲೆಂಡರ್‍ ನಲ್ಲಿ ಮಹಾತ್ಮ ಗಾಂಧಿಯವರ ಫೋಟೊ ಬದಲು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಪ್ರಕಟಿಸಿದ್ದನ್ನು ಟೀಕಿಸಿದ ರಾಹುಲ್, ಮಹಾತ್ಮ ಗಾಂಧೀಜಿಯವರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಅಂಥವರ ಚಿತ್ರವನ್ನೇ ಮೋದಿ ತೆಗೆದು ಹಾಕಿದ್ದಾರೆ.

ನೋಟುರದ್ದತಿಯ ಮೂಲಕ ಮೋದಿಯವರು ಭಾರತೀಯ ರಿಸರ್ವ್ ಬ್ಯಾಂಕ್‍ನ ವಿಶ್ವಾಸರ್ಹತೆಯನ್ನೇ ಹಾಳು ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಭಾರತೀಯ ರಿಸರ್ವ್ ಬ್ಯಾಂಕ್‍ನ್ನು ಸುದೃಢ ಮಾಡುವ ಕಾರ್ಯವನ್ನು ಮಾಡಿತ್ತು. ಆದರೆ ಮೋದಿಯವರು ಅದನ್ನೇ ನಾಶ ಮಾಡಿದ್ದಾರೆ ಎಂದು ರಾಹುಲ್ ಟೀಕಾ ಪ್ರಹಾರ ಮಾಡಿದ್ದಾರೆ.

Comments are closed.