ಮನೋರಂಜನೆ

5 ದಿನಗಳಲ್ಲಿ ರಂಗೂನ್ ಟ್ರೇಲರ್ ಕೋಟಿ ಬಾರಿ ವೀಕ್ಷಣೆ

Pinterest LinkedIn Tumblr


ನವದೆಹಲಿ: ಸೈಫ್ ಅಲಿ ಖಾನ್, ಶಾಹಿದ್ ಕಪೂರ್ ಮತ್ತು ಕಂಗನಾ ರಣಾವತ್ ನಟಿಸಿರುವ ‘ರಂಗೂನ್’ ಸಿನೆಮಾದ ಟ್ರೇಲರ್ ಸಂಚಲನ ಮೂಡಿಸಿದ್ದು, ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಟ್ರೇಲರ್ ಬಿಡುಗಡೆಯಾದ ೫ ದಿನಗಳಲ್ಲಿ ಯುಟ್ಯೂಬ್ ನಲ್ಲಿ ಒಂದು ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
ಈ ಟ್ರೇಲರ್ ಅತಿ ಹೆಚ್ಚು ಬಾರಿ ವೀಕ್ಷಣೆಗೊಳಗಾಗುತ್ತಿರುವುದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಕೂಡ ಒಳಪಟ್ಟಿದೆ. ಮೂರು ಜನಪ್ರಿಯ ನಟರನ್ನು ಒಳಗೊಂಡ ಈ ಚಿತ್ರದಲ್ಲಿ, ಕಥೆ ಕೂಡ ಬಿಗಿಯಾಗಿರುವ ಸೂಚನೆಗಳು ಟ್ರೇಲರ್ ನಲ್ಲಿ ಸಿಕ್ಕಿವೆ.
ಈ ಹಿಂದೆ ನಿರ್ದೇಶಕ ವಿಶಾಲ್ ಭಾರದ್ವಾಜ್ ಮತ್ತು ನಟ ಶಾಹಿದ್ ಕಪೂರ್ ಒಟ್ಟಿಗೆ ಕೆಲಸ ಮಾಡಿದ್ದ ‘ಓಂಕಾರ’, ‘ಹೈದರ್’,ಮತ್ತು ‘ಕಾಮಿನೇ’ ಯಶಸ್ವಿ ಸಿನೆಮಾಗಳಾಗಿ ಗುರುತಿಸಿಕೊಂಡಿದ್ದವು.
ವಿಶಾಲ್ ಭಾರದ್ವಾಜ್ ನಿರ್ದೇಶನ ಮಾಡಿರುವುದಲ್ಲಿದೆ, ಸಹ ನಿರ್ಮಾಪಕ ಕೂಡ. ಐತಿಹಾಸಿಕ ಕಥಾಹಂದರವನ್ನು ಹೊಂದಿರುವ ಈ ಸಿನೆಮಾ ಫೆಬ್ರವರಿ ೧೪ ಕ್ಕೆ ಬಿಡುಗಡೆಯಾಗಲಿದೆ.

Comments are closed.