ರಾಷ್ಟ್ರೀಯ

ವಸತಿ ಶಾಲೆಯಲ್ಲಿ ಅತ್ಯಾಚಾರ ಆರೋಪ: ಅಸಲಿಗೆ ರೇಪ್ ಅಂದ್ರೆ ಏನು ಗೊತ್ತಾ? ಎಂದು ಪ್ರಶ್ನೆ ಕೇಳಿದ ಶಾಸಕ

Pinterest LinkedIn Tumblr


ಪಾಟ್ನಾ: ಸರ್ಕಾರಿ ಸ್ವಾಮ್ಯದ ವಸತಿ ಶಾಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಇತರೆ ಬಾಲಕಿಯರಿಗೆ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯ (ಆರ್ ಎಲ್ ಎಸ್ ಪಿ) ಶಾಸಕರು ಆಕ್ಷೇಪಾರ್ಹ ಪ್ರಶ್ನೆಗಳನ್ನು ಕೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಇಂದು ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ದಲಿತ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದ್ದ ರೋಹ್ಟಾಸ್ ಜಿಲ್ಲೆಯ ಚೆನಾರಿ ಶಾಸಕ ಲಲನ್ ಪಾಸ್ವಾನ್ ಅವರು, “ಒಂದು ಹುಡುಗಿ ಅತ್ಯಾಚಾರಕ್ಕೊಳಗಾಗಿದ್ದಾಳೆ ಅಂತ ಹೇಗೆ ಹೇಳ್ತೀರಿ? ಅಸಲಿಗೆ ರೇಪ್ ಅಂದ್ರೆ ಏನು ಗೊತ್ತಾ? ಹಾಗಾದಾಗ ರಕ್ತ ಎಲ್ಲಿಂದ ಬರುತ್ತೆ ಹೇಳಿ ನೋಡೋಣ?” ಎಂಬ ನಿರ್ಲಜ್ಜ ಪ್ರಶ್ನೆಗಳನ್ನು ಹತ್ಯೆಯಾದ ಬಾಲಕಿಯ ಗೆಳತಿಯರಿಗೆ ಕೇಳಿದ್ದಾರೆ.
ಜನಪ್ರತಿನಿಧಿಯೊಬ್ಬರು ಹಾಸ್ಟೆಲ್ ನಲ್ಲಿರುವ 11ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯರ ಬಳಿ ಇಂಥ ಪ್ರಶ್ನೆಗಳನ್ನು ಕೇಳಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಜನವರಿ 8ರಂದು ಬೆಳಗ್ಗೆ ಇದೆ ಹಾಸ್ಟೆಲ್ ನಲ್ಲಿ ಓದುತ್ತಿದ್ದ ಬಾಲಕಿಯ ಶವ, ಹಾಸ್ಟೆಲ್ ನಿಂದ ತುಸು ದೂರ ಪತ್ತೆಯಾಗಿತ್ತು. ರಕ್ತ ಸಿಕ್ತವಾಗಿ, ಬಟ್ಟೆ ಹರಿದಿದ್ದರಿಂದಾಗಿ ಅದು ಅತ್ಯಾಚಾರವೆಂದೇ ಭಾಸವಾಗುವಂತಿತ್ತು.
ಪ್ರಕರಣದ ಹಿನ್ನೆಲೆಯಲ್ಲೇ ಇಂದು ಹಾಸ್ಟೆಲ್ ಗೆ ಭೇಟಿ ನೀಡಿದ ಶಾಸಕ ಮಹಾಶಯ, ಅಲ್ಲಿನ ಹುಡುಗಿಯರ ಬಳಿ ಪ್ರಕರಣದ ತನಿಖೆಯನ್ನೇ ಶುರು ಮಾಡಿದ್ದಾರೆ. ಮೊದಲೇ ಭೀತಿಗೊಳಗಾಗಿದ್ದ ಹುಡುಗಿಯರ ಬಳಿಗೆ ತೆರಳಿ, ರೇಪ್ ಅಂದ್ರೆ ಏನು ಗೊತ್ತಾ… ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಅವರನ್ನು ಮುಜುಗರಕ್ಕಿಡು ಮಾಡಿದ್ದಾರೆ.

Comments are closed.