ಮನೋರಂಜನೆ

ತೆಲುಗು ನಟ ಚಿರಂಜೀವಿಯ ‘ಖೈದಿ ನಂ 150’ ಬಿಡುಗಡೆ

Pinterest LinkedIn Tumblr


ಹೈದರಾಬಾದ್‌: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷೆಯ 150 ನೇ ಚಿತ್ರ ‘ಖೈದಿ ನಂ 150’ ಇಂದು ವಿಶ್ವದೆಲ್ಲಡೆ ಬಿಡುಗಡೆಯಾಗುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ 1400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ.

ಹತ್ತು ವರ್ಷಗಳ ಬಳಿಕ ಚಿರಂಜೀವಿ ‘ಖೈದಿ ನಂ 150’ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರಮಂದಿರಗಳ ಮುಂದೆ ಮೆಗಾಸ್ಟಾರ್ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ವಿ.ವಿ.ವಿನಾಯಕ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ದೇವಿಶ್ರೀ ಪ್ರಸಾದ್‌ ಸಂಗೀತ ನೀಡಿದ್ದಾರೆ.

Comments are closed.