ಬೆಂಗಳೂರು: ಒಂದೆಡೆ ಬಿಗ್‌ಬಾಸ್‌ನ ಇಡೀ ಮನೆಯಲ್ಲಿ ಹೊರಹೋಗಿರುವ ಪ್ರಥಮ್’ನ ವಿರುದ್ಧವೇ ಸ್ಪರ್ಧಿಗಳ ಮಾತು. ಇನ್ನೊಂದೆಡೆ ಸೀಕ್ರೆಟ್ ರೂಮ್’ನಲ್ಲಿರುವ ಪ್ರಥಮ್ ಅವರು ಮಾಳವಿಕರೊಂದಿಗೆ ಮಾತಿನ ಸಮರವನ್ನೇ ನಡೆಸಿದರು.
ಬಿಗ್‌ಬಾಸ್ ಮನೆಯಿಂದ ಹೊರ ಹೋದ ಮೇಲೂ ಮನೆಯಲ್ಲೆಲ್ಲಾ ಪ್ರಥಮ್‌ದ್ದೇ ಮಾತು. ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿರುವ ಸುನಾಮಿ ಕಿಟ್ಟಿ ಮುಂದೆ ಮೋಹನ್, ಕೀರ್ತಿ, ಶಾಲಿನಿ ಹಾಗು ಭುವನ್ ಅವರು ಪ್ರಥಮ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. ಪ್ರಥಮ್‌ನಿಂದಾಗಿ ಇಡೀ ಮನೆ ಸಫರ್ ಆಗಿದೆ ಎಂದು ಮೋಹನ್ ಹೇಳಿದ್ರೆ, ಪ್ರಥಮ್ ಸ್ವಾರ್ಥಿ, ತನ್ನ ಬಗ್ಗೆಯೇ ಯೋಚಿಸುತ್ತಾನೆ ಎಂದು ಕೀರ್ತಿ ಹೇಳಿಕೊಂಡಿದ್ದಾರೆ.
ಇನ್ನು ಸೀಕ್ರೆಟ್ ರೂಮ್‌ನಲ್ಲಿ ಕೂತು ಇದೆಲ್ಲವನ್ನೂ ಕೇಳುತ್ತಿದ್ದ ಪ್ರಥಮ್ ಹಾಗೂ ಮಾಳವಿಕರ ನಡುವೆ ಕಿತ್ತಾಟವೇ ನಡೆಯಿತು. ಪ್ರಥಮ್ ನೀನು ವಿನ್ ಆಗಲ್ಲ, ಬೇಕಾದರೆ ಇಲ್ಲಿಯೇ ಬರೆದು ಕೋಡ್ತೀನಿ ಅಂತ ಮಾಳವಿಕ ಹೇಳಿದ ಮಾತು ಪ್ರಥಮ್‌ಗೆ ಆಕ್ರೋಶವನ್ನುಂಟು ಮಾಡಿತು. ಈ ವೇಳೆ ಪ್ರಥಮ್ ಅವರು ಮಾಲವೀಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.
ಈ ಬಗ್ಗೆ ಪ್ರಥಮ್ ಹಾಗೂ ಮಾಳವಿಕ ನಡುವೆ ಮಾತಿನ ಚಕಮಕಿ ನಡೆಯಿತು. ನನ್ನ ಬಗ್ಗೆ ಈ ರೀತಿ ಹೇಳಲು ನಿಮಗೆ ಯಾವುದೇ ನೈತಿಕ ಹಕ್ಕಿಲ್ಲ. ನಾನು ಗೆಲ್ಲುತ್ತೇನೋ ಇಲ್ಲವೋ ಅನ್ನೋದು ಬೇರೆ ವಿಷ್ಯ. ನಿಮ್ಮ ಮಾತು ಕೇಳಿ ನನಗೆ ಅಸಹ್ಯವಾಗುತ್ತಿದೆ ಎಂದು ಪ್ರಥಮ್ ಮಾಳವಿಕಾರ ಮೇಲೆ ಕಿಡಿ ಕಾರಿದರು.
ಹೀಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳೂ ಉಂಟಾದವು. ಮಾಳವಿಕ ಕೊನೆಗೆ ನಯವಾಗಿ ಮಾತನಾಡಲು ಪ್ರಾರಂಭಿಸಿದಾಗ ನಿಮ್ಮ ಅತಿಯಾದ ಬುದ್ಧಿವಂತಿಕೆ ನನ್ನಲ್ಲಿ ತೋರಿಸಬೇಡಿ ಎಂದು ಪ್ರಥಮ್ ಕಟುವಾಗಿ ನುಡಿದರು. ಇದು ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ ಮಾಳವಿಕ ಪ್ರಥಮ್‌ರ ಮಾತಿಗೆ ತಲೆಕೆಡಿಸಿಕೊಂಡು, ಸಾಕು ಮಾರಾಯ ನಿಲ್ಲಿಸು ಅನ್ನೋವಷ್ಟರ ಮಟ್ಟಿಗೆ ಹೋಯಿತು. ಅಂತೂ ಪ್ರಥಮ್‌ನ ಜೊತೆಗೆ ಮಾತಿಗೆ ಬಿದ್ದು ಮಾಳವಿಕ ಸುಸ್ತಾಗಿ ಹೋದರು.
Comments are closed.